BLR Today
ಭಾನುವಾರ, ಅಕ್ಟೋಬರ್ 4, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru57 ನಿಮಿಷಗಳ ಹಿಂದೆ

ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ: ಕೆಪಿಎಸ್​ಸಿಯ ನಾಲ್ವರು ಸದಸ್ಯರಿಗೆ ಇಡಿ ಸಂಕಷ್ಟ ಸಾಧ್ಯತೆ

ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ: ಕೆಪಿಎಸ್​ಸಿಯ ನಾಲ್ವರು ಸದಸ್ಯರಿಗೆ ಇಡಿ ಸಂಕಷ್ಟ ಸಾಧ್ಯತೆ
ಚಿತ್ರ: TV9 Kannada

ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣ ಸಂಬಂಧ ಕೆಪಿಎಸ್​ಸಿಯ ನಾಲ್ವರು ಸದಸ್ಯರಿಗೆ ಇಡಿ ಸಂಕಷ್ಟ ಸಾಧ್ಯತೆಯಿದೆ ಎನ್ನಲಾಗಿದೆ. ವಿಚಾರಣೆ ವೇಳೆ ನಾಲ್ವರ ಹೆಸರನ್ನು ಜ್ಞಾನೇಂದ್ರ ಬಾಯ್ಬಿಟ್ಟಿದ್ದು, ಕೆಪಿಎಸ್ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಬಿ.ವಿ.ಗೀತಾ, ಶಾಂತಾ ಹೊಸಮನಿ ಸೇರಿದಂತೆ ನಾಲ್ವರಿಗೆ ಇಡಿ ವಿಚಾರಣೆ ಬಿಸಿ ತಟ್ಟುವ ಲಕ್ಷ್ಣಗಳು ಗೋಚರಿಸಿವೆ. ಕೆಲ ಸದಸ್ಯರು, ಸಿಬ್ಬಂದಿಯೂ ಅಭ್ಯರ್ಥಿಗಳಿಂದ ಹಣ ಪಡೆದ ಬಗ್ಗೆ ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ. ಮೆರಿಟ್ ಲಿಸ್ಟ್ನ ಇದ್ದ ಅಭ್ಯರ್ಥಿಗಳ ಮಾಹಿತಿ ಸಂಗ್ರಹಿಸುತ್ತಿದ್ದ ಸದಸ್ಯರು ಮತ್ತು ಸಿಬ್ಬಂದಿ ಕೂಡಲೇ ಮಧ್ಯವರ್ತಿಗಳ ಮೂಲಕ ಅವರನ್ನು ಸಂಪರ್ಕಿಸಿ ಉದ್ಯೋಗ ಕೊಡಿಸುವ ಭರವಸೆ ನೀಡ್ತಿದ್ದರು. ಅದಕ್ಕೆ ಮುಂಗಡವಾಗಿ 5 ಲಕ್ಷದಿಂದ 10 ಲಕ್ಷದವರೆಗೆ ಹಣ ಪಡೆಯುತ್ತಿದ್ರು. ಆದ್ರೆ ಎಷ್ಟು ಹಣ ಕೊಡಬೇಕು ಎಂದು ಮಾತ್ರ ಹೇಳುತ್ತಿರಲಿಲ್ಲ ಎಂಬ ಬಗ್ಗೆ ಇಡಿ ವಿಚಾರಣೆ ವೇಳೆ ಜ್ಞಾನೇಂದ್ರ ತಿಳಿಸಿದ್ದಾರೆ ಎನ್ನಲಾಗಿದೆ.

ಮೂಲ ವರದಿ: TV9 Kannada ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
KPSCBengaluruCorruptionCBI