ಕಾಡಾನೆ ವಾಪಸ್ ಬನ್ನೇರುಘಟ್ಟ ಅರಣ್ಯಕ್ಕೆ ಕಳುಹಿಸಿದ ಅರಣ್ಯ ಇಲಾಖೆ
ಬೆಂಗಳೂರಿನ ಹೊರವಲಯದಲ್ಲಿ ಕಾರ್ಮಿಕನನ್ನು ಬಲಿ ತೆಗೆದುಕೊಂಡ ಕಾಡಾನೆಯನ್ನು ಅರಣ್ಯಕ್ಕೆ ಕಳುಹಿಸುವ ಕಾರ್ಯಾಚರಣೆ ಸಕ್ಸಸ್ ಆಗಿದೆ. ಆನೆಯನ್ನು ವಾಪಸ್ ಬನ್ನೇರುಘಟ್ಟ ಅರಣ್ಯಕ್ಕೆ ಕಳುಹಿಸಲಾಗಿದೆ. ಅಧಿಕಾರಿಗಳು ರಾತ್ರಿ ಥರ್ಮಲ್ ಡ್ರೋನ್ ಕಾರ್ಯಾಚರಣೆ ಮಾಡಿದ್ದಾರೆ. ಬಿಎಂ ಕಾವಲು ಅರಣ್ಯದಲ್ಲಿ ಒಂಟಿ ಸಲಗ ಇತ್ತು. ಎಲಿಫೆಂಟ್ ಕಾರಿಡಾರ್ ಮೂಲಕ ಆನೆಯನ್ನು ಬನ್ನೇರುಘಟ್ಟಕ್ಕೆ ಓಡಿಸಲಾಗಿದೆ. ಡಿಸಿಎಫ್ ಚಕ್ರಪಾಣಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಕಾರ್ಯಾಚರಣೆಗೆ 2 ಥರ್ಮಲ್ ಡ್ರೋನ್, 100 ಕ್ಕೂ ಅಧಿಕ ಸಿಬ್ಬಂದಿ ಬಳಕೆ ಮಾಡಲಾಗಿತ್ತು.
ಮೂಲ ವರದಿ: Public TV
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
ಇದೇ ಸುದ್ದಿ ವರದಿ ಮಾಡಿದ ಇತರ ಮಾಧ್ಯಮಗಳು: TV9 Kannada
BengaluruForest DepartmentBannerghatta ForestBM Kavu Forest


