BLR Today
ಗುರುವಾರ, ಸೆಪ್ಟೆಂಬರ್ 24, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru3 ಗಂಟೆಗಳ ಹಿಂದೆ

ಬೆಂಗಳೂರಿನ ಉಪ್ಪಿನಕಾಯಿ ಘಟಕಕ್ಕೆ ನೈರ್ಮಲ್ಯ ಕೊರತೆಯಿಂದ ಬೀಗ

ಬೆಂಗಳೂರಿನ ಉಪ್ಪಿನಕಾಯಿ ಘಟಕಕ್ಕೆ ನೈರ್ಮಲ್ಯ ಕೊರತೆಯಿಂದ ಬೀಗ
ಚಿತ್ರ: Prajavani

ಬೆಂಗಳೂರಿನ ಕಾಮಾಕ್ಷಿಪಾಳ್ಯದ ಎಸ್.ಪಿ. ಮಲೆನಾಡು ಎಂಟರ್‌ಪ್ರೈಸಸ್‌ನ ಉಪ್ಪಿನಕಾಯಿ ತಯಾರಿಕಾ ಘಟಕದ ಮೇಲೆ ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ನೈರ್ಮಲ್ಯ ಕೊರತೆಯ ಕಾರಣ ಘಟಕಕ್ಕೆ ಬೀಗ ಹಾಕಿದ್ದಾರೆ. ದಾಳಿ ವೇಳೆ ಅಧಿಕಾರಿಗಳು ಉಪ್ಪಿನ ಕಾಯಿ ತಯಾರಿಕೆ ಮತ್ತು ಸಂಗ್ರಹಣೆಯ ವಿಧಾನ, ಬಳಕೆಯ ಅವಧಿ, ತಯಾರಿಕಾ ಸ್ಥಳದಲ್ಲಿನ ನೈರ್ಮಲ್ಯ, ಉಪ್ಪಿನ ಕಾಯಿಗೆ ಬಳಸಿದ ಪದಾರ್ಥಗಳ ಗುಣಮಟ್ಟ, ಕಚ್ಚಾ ವಸ್ತುಗಳ ಸಂಗ್ರಹಣೆ ಹಾಗೂ ‘ಲೇಬಲಿಂಗ್’ ಸೇರಿದಂತೆ ವಿವಿಧ ಆಹಾರ ಸುರಕ್ಷತಾ ಅಂಶಗಳನ್ನು ಪರಿಶೀಲಿಸಿದರು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
Food SafetyBengaluruHygieneSealing