BLR Today
ಶುಕ್ರವಾರ, ನವೆಂಬರ್ 27, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru7 ದಿನಗಳ ಹಿಂದೆ

ಫುಡ್ ಡೆಲಿವರಿ ಬಾಯ್‌ ಸಾವು, ಕೆಂಗೇರಿ ಬಳಿ ಅಪಘಾತ

ಫುಡ್ ಡೆಲಿವರಿ ಬಾಯ್‌ ಸಾವು, ಕೆಂಗೇರಿ ಬಳಿ ಅಪಘಾತ
ಚಿತ್ರ: Prajavani

ಕೆಂಗೇರಿ ಬಳಿಯ ಗ್ಲೋಬಲ್‌ ವಿಲೇಜ್‌ ರಸ್ತೆಯಲ್ಲಿ ಗುರುವಾರ ಮುಂಜಾನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದ ಚಿತ್ತರಂಜನ್‌ ಕುಮಾರ್ (22) ಮೃತಪಟ್ಟಿದ್ದಾರೆ. ಬಿಹಾರದ ಚಿತ್ತರಂಜನ್‌ ಕುಮಾರ್ ಅವರು ಕೆಲಸದ ನಿಮಿತ್ತ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ. ಅತಿವೇಗವಾಗಿ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ಚಿತ್ತರಂಜನ್‌ ಕುಮಾರ್ ನಿಯಂತ್ರಣ ತಪ್ಪಿ ಪಾದಚಾರಿ ಮಾರ್ಗದ ತಡೆಗೋಡೆಗೆ ವಾಹನ ಗುದ್ದಿದ್ದಾರೆ. ನಂತರ ನಿಯಂತ್ರಣಕ್ಕೆ ಸಿಗದೆ ಅಡ್ಡಾದಿಡ್ಡಿ ಚಲಿಸಿದ ದ್ವಿಚಕ್ರ ವಾಹನವು ಮೋರಿಗೆ ಬಿದ್ದಿದೆ. ಸ್ಥಳೀಯರು ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಅಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಮೃತಪಟ್ಟಿದ್ದಾರೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruKengeriAccidentDeath