BLR Today
ಮಂಗಳವಾರ, ಅಕ್ಟೋಬರ್ 20, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಹಬ್ಬದ ಸುದ್ದಿBengaluru3 ಗಂಟೆಗಳ ಹಿಂದೆ

ಹೂವಿನ ಹಾರ; ಜೇಬಿಗೆ ಭಾರ... ಹಟ್ಟಿ ಚಿನ್ನದ ಗಣಿ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ

ಹೂವಿನ ಹಾರ; ಜೇಬಿಗೆ ಭಾರ... ಹಟ್ಟಿ ಚಿನ್ನದ ಗಣಿ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ
ಚಿತ್ರ: Prajavani

ನವರಾತ್ರಿ ಹಬ್ಬದ ಆಯುಧ ಪೂಜೆ ಅಂಗವಾಗಿ ಹಟ್ಟಿ ಚಿನ್ನದ ಗಣಿ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿತ್ತು. ಬರದೊಂದಿಗೆ ಬೆಲೆಯೇರಿಕೆಯ ಬಿಸಿ ಜನರಿಗೆ ತಟ್ಟಿತು. ಮಹಿಳೆಯರು ಕುಟುಂಬ ಸಮೇತ ಹೂ, ಹಣ್ಣು ಸೇರಿ ಹಬ್ಬಕ್ಕೆ ಬೇಕಾಗುವ ಸಾಮಗ್ರಿಗಳನ್ನು ಖರೀದಿಸಿದರು. ಕೆಜಿಗೆ ಚೆಂಡು ಹೂವು ₹120, ಸೇವಂತಿಗೆ, ಮಲ್ಲಿಗೆ ಹೂ ಮೊಳಕ್ಕೆ ₹50, ಹಾರದ ದಂಡಿಗೆ ₹120. ಸೇಬು, ಮೋಸಂಬಿ, ಸಂತ್ರ, ಪೇರಲ, ದಾಳಿಂಬೆ, ಸಪೋಟ ಹಣ್ಣುಗಳು ₹250-₹300 ರವರಗೆ ಮಾರಾಟವಾದವು. ಗ್ರಾಮೀಣ ಗ್ರಾಮಗಳಾದ ಯಲಗಟ್ಟಾ, ಮಾಚನೂರು, ಗೌಡೂರು, ನಿಲೋಗಲ್, ವೀರಾಪುರ, ಆನ್ವರಿ, ಕೋಠಾ, ಗುರುಗುಂಟಾ, ಚಿಕ್ಕಹೆಸರೂರು, ನಗನೂರು ಸೇರಿದಂತೆ ಇತರೆ ಗ್ರಾಮದ ಜನರು ಪೂಜೆಗೆ ಬೇಕಾದ ಸಾಮಗ್ರಿಗಳನ್ನು ಖರೀದಿಸಿದರು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruFestivalMarketFlowersPrices