BLR Today
ಭಾನುವಾರ, ಅಕ್ಟೋಬರ್ 11, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru3 ಗಂಟೆಗಳ ಹಿಂದೆ

೨೦೨೩ನೇ ಸಾಲಿನ ಪ್ರಥಮ ಮುದ್ರಣ ಪುಸ್ತಕಗಳ ಪ್ರದರ್ಶನ ಬೆಂಗಳೂರಿನಲ್ಲಿ

೨೦೨೩ನೇ ಸಾಲಿನ ಪ್ರಥಮ ಮುದ್ರಣ ಪುಸ್ತಕಗಳ ಪ್ರದರ್ಶನ ಬೆಂಗಳೂರಿನಲ್ಲಿ
ಚಿತ್ರ: Prajavani

೨೦೨೩ನೇ ಸಾಲಿನಲ್ಲಿ ಪ್ರಕಟಗೊಂಡು, ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ ಆಯ್ಕೆಯಾದ ಹಾಗೂ ಆಯ್ಕೆಯಾಗದ ಪುಸ್ತಕಗಳ ಪ್ರದರ್ಶನವನ್ನು ಅ.12ರಿಂದ 14 ರವರೆಗೆ ಬೆಂಗಳೂರಿನ ಎಂ.ಸಿ. ಬಡಾವಣೆಯಲ್ಲಿರುವ ಡಾ.ವಿಷ್ಣುವರ್ಧನ ಸ್ಮಾರಕ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಸಮಿತಿಯಿಂದ ಆಯ್ಕೆಯಾದ ಪುಸ್ತಕಗಳ ತಾತ್ಕಾಲಿಕ ಪಟ್ಟಿಯನ್ನು ಆಯಾ ಜಿಲ್ಲಾ ಹಾಗೂ ನಗರ ಕೇಂದ್ರ ಗ್ರಂಥಾಲಯಗಳ ಕಚೇರಿಯಲ್ಲಿ ಪ್ರದರ್ಶಿಸಲಾಗುತ್ತದೆ. ಜೊತೆಗೆ, ಗ್ರಂಥಾಲಯ ಇಲಾಖೆಯ ಅಧಿಕೃತ ವೆಬ್‌ಸೈಟ್ dpl.karnataka.gov.in ನಲ್ಲಿ ಪ್ರಕಟಿಸಲಾಗುವುದು. ಪುಸ್ತಕ ಆಯ್ಕೆ ಕುರಿತು ಲೇಖಕರು, ಪ್ರಕಾಶಕರು ಅಥವಾ ಪುಸ್ತಕ ಮಾರಾಟಗಾರರಿಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ, ಅ.22ರೊಳಗೆ ಆಯುಕ್ತರು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ವಿಶ್ವೇಶ್ವರಯ್ಯ ಮುಖ್ಯ ಗೋಪುರ, 4ನೇ ಮಹಡಿ, ಡಾ. ಅಂಬೇಡ್ಕರ್ ವೀಧಿ, ಬೆಂಗಳೂರು-560001 ಇವರಿಗೆ ಸಂಪರ್ಕಿಸಬಹುದು ಎಂದು ನಗರ ಕೇಂದ್ರ ಗ್ರಂಥಾಲಯ ಮುಖ್ಯ ಗ್ರಂಥಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruBooksExhibitionCulture