BLR Today
ಮಂಗಳವಾರ, ನವೆಂಬರ್ 10, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru2 ಗಂಟೆಗಳ ಹಿಂದೆ

ಬೆಂಗಳೂರಿನಲ್ಲಿ ಪಟಾಕಿ ಅವಘಡದಿಂದ ಕಣ್ಣಿನ ಗಾಯಗಳ ಸಂಖ್ಯೆ 61ಕ್ಕೆ ಏರಿಕೆ

ಬೆಂಗಳೂರಿನಲ್ಲಿ ಪಟಾಕಿ ಅವಘಡದಿಂದ ಕಣ್ಣಿನ ಗಾಯಗಳ ಸಂಖ್ಯೆ 61ಕ್ಕೆ ಏರಿಕೆ
ಚಿತ್ರ: Public TV

ಬೆಂಗಳೂರಿನ ಕಣ್ಣಿನ ಆಸ್ಪತ್ರೆಗಳಲ್ಲಿ ಸಾಲು ಸಾಲು ಪಟಾಕಿ ಅವಘಡ ಪ್ರಕರಣಗಳು ಸಂಭವಿದ್ದು, ಪಟಾಕಿ ಸಿಡಿತದಿಂದ ಉಂಟಾದ ಅವಘಡಗಳ ಸಂಖ್ಯೆ ಇದೀಗ 61ಕ್ಕೆ ಏರಿಕೆಯಾಗಿದೆ. ಬಾಲಕರಿಂದ ಹಿಡಿದು 40 ವರ್ಷ ವಯಸ್ಸಿನವರೆಗೂ ವ್ಯಕ್ತಿಗಳು ಪಟಾಕಿ ಸಿಡಿಸಲು ಹೋಗಿ ಕಣ್ಣಿಗೆ ಹಾನಿ ಮಾಡಿಕೊಳ್ಳುತ್ತಿದ್ದಾರೆ. ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ ಪಟಾಕಿ ಪ್ರಕರಣ 20ಕ್ಕೆ ಏರಿಕೆಯಾಗಿದೆ. ನಾರಾಯಣ ನೇತ್ರಾಲಯ ಆಸ್ಪತ್ರೆಯಲ್ಲಿ ಪಟಾಕಿ ಸಿಡಿತದಿಂದ ಗಾಯಗೊಂಡವರ ಸಂಖ್ಯೆ 41ಕ್ಕೆ ಏರಿಕೆ ಆಗಿದೆ. ಒಟ್ಟು ಗಾಯಗೊಂಡವರ ಪೈಕಿ, ಸ್ವತಃ ಪಟಾಕಿ ಹಚ್ಚುವಾಗ 23 ಜನರಿಗೆ ಗಾಯ ಹಾಗೂ 8 ಜನ ಪಟಾಕಿ ಹಚ್ಚುವುದನ್ನ ನೋಡುತ್ತಿದ್ದಾಗ ಕಣ್ಣಿಗೆ ಗಾಯ ಆಗಿದೆ.

ಮೂಲ ವರದಿ: Public TV ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruFireworksEye InjuryAccident