ಬೆಂಗಳೂರಿನ ಮಂದಿರದಲ್ಲಿ 'ಬೆಟಾಲಿಯನ್' ಚಿತ್ರೀಕರಣ ಆರಂಭ
ಏಳು ಹುಡುಗರ ಹುಡುಗಾಟ, ತಲೆಹರಟೆ, ಸ್ನೇಹ–ಕಿತ್ತಾಟವೇ ಕಥೆಯಾಗಿರುವ ‘ಬೆಟಾಲಿಯನ್’ ಚಿತ್ರದ ಚಿತ್ರೀಕರಣ ಇತ್ತೀಚೆಗೆ ಆರಂಭವಾಗಿದೆ. ಬೆಂಗಳೂರಿನ ಶ್ರೀಮಹಾಲಕ್ಷ್ಮಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿದ್ದು, ನಿರ್ಮಾಪಕ ಪ್ರಕಾಶ್ ಬೂದೂರು ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಕಾಸರಗೋಡು, ಕಾರ್ಕಳ, ಗೋವಾ ಹಾಗೂ ಬೆಂಗಳೂರು ಸುತ್ತಮುತ್ತ ಸುಮಾರು 50 ದಿನ ಚಿತ್ರೀಕರಣ ನಡೆಯಲಿದೆ.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruFilmEntertainment


