BLR Today
ಭಾನುವಾರ, ಅಕ್ಟೋಬರ್ 18, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಕ್ರೀಡೆBengaluru1 ಗಂಟೆಗಳ ಹಿಂದೆ

ಬೆಂಗಳೂರು ಎಫ್‌ಸಿ ಗೆಲುವಿನ ಓಟ ಮುಂದುವರೆಸಿ 'ದಕ್ಷಿಣ ಡರ್ಬಿ'ಯಲ್ಲಿ ಚೆನ್ನೈ ಎಫ್‌ಸಿ ವಿರುದ್ಧ ಗೆಲುವು

ಬೆಂಗಳೂರು ಎಫ್‌ಸಿ ಗೆಲುವಿನ ಓಟ ಮುಂದುವರೆಸಿ 'ದಕ್ಷಿಣ ಡರ್ಬಿ'ಯಲ್ಲಿ ಚೆನ್ನೈ ಎಫ್‌ಸಿ ವಿರುದ್ಧ ಗೆಲುವು
ಚಿತ್ರ: Prajavani

ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯಲ್ಲಿ ಬೆಂಗಳೂರು ಎಫ್‌ಸಿ (ಬಿಎಫ್‌ಸಿ) ತಂಡದ ಗೆಲುವಿನ ಓಟ ಮುಂದುವರಿಯಿತು. 'ದಕ್ಷಿಣ ಡರ್ಬಿ'ಯ ಪಂದ್ಯದಲ್ಲಿ ಸುನಿಲ್‌ ಚೆಟ್ರಿ ಪಡೆಯು 2–0ಯಿಂದ ಚೆನ್ನೈಯಿನ್‌ ಎಫ್‌ಸಿ (ಸಿಎಫ್‌ಸಿ) ತಂಡವನ್ನು ನಿರಾಯಾಸವಾಗಿ ಮಣಿಸಿತು. ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ಸೋನೆ ಮಳೆಯ ಸಿಂಚನದ ನಡುವೆಯೇ ಆರಂಭವಾದ ಪಂದ್ಯದಲ್ಲಿ ಆತಿಥೇಯ ತಂಡದ ಆಟಗಾರರು ಪಾರಮ್ಯ ಮೆರೆದರು. ತಾರಾ ಮಿಡ್‌ಫೀಲ್ಡರ್‌ ರಯಾನ್‌ ವಿಲಿಯಮ್ಸ್‌ ಅವರು 24ನೇ ನಿಮಿಷದಲ್ಲಿ ಗೋಲಿನ ರಂಗು ಚೆಲ್ಲಿದರೆ, ಮಾಂಟಿನೆಗ್ರೊ ಆಟಗಾರ ಮೀಹೈಲೊ ಪೆರೊವಿಚ್‌ (52ನೇ ನಿ.) ಗೆಲುವಿನ ಅಂತರವನ್ನು ಹಿಗ್ಗಿಸಿ, ತವರಿನ ಪ್ರೇಕ್ಷಕರನ್ನು ರಂಜಿಸಿದರು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruISLBengaluru FCSports