ಕಬ್ಬಿನ ಬೆಲೆ ಕುರಿತು ರೈತ ಸಂಘಟನೆಗಳು ಕೇಂದ್ರ ತಂಡಕ್ಕೆ ಮನವಿ
ಕಬ್ಬಿನ ವೈಜ್ಞಾನಿಕ ಬೆಲೆ ನಿಗದಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಅಗತ್ಯ ಶಿಫಾರಸು ಮಾಡುವಂತೆ ವಿವಿಧ ರೈತ ಸಂಘಟನೆಗಳ ಮುಖಂಡರು ರಮೇಶ್ ಚಂದ್ರ ನೇತೃತ್ವದ ಕೇಂದ್ರ ಅಧ್ಯಯನ ತಂಡಕ್ಕೆ ಗುರುವಾರ ಮನವಿ ಮಾಡಿದರು. ರಾಜ್ಯ ರೈತ ಸಂಘ, ಕರ್ನಾಟಕ ಪ್ರಾಂತ ರೈತ ಸಂಘ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು, 'ಕರ್ನಾಟಕ ಬೆಲೆ ಆಯೋಗ ಸೂಚಿಸಿದಂತೆ ಕಬ್ಬು ಬೆಳೆ ವೆಚ್ಚದ ಆಧಾರದಲ್ಲಿ ಶೇ 50ರಷ್ಟು ಹೆಚ್ಚುವರಿ ಸೇರಿಸಿ, ನ್ಯಾಯಯುತ ಮತ್ತು ಲಾಭದಾಯಕ ಬೆಲೆ (ಎಫ್‌ಆರ್‌ಪಿ) ನಿಗದಿ ಮಾಡಬೇಕು' ಎಂದು ಕೋರಿದರು. ಎಫ್‌ಆರ್‌ಪಿ ನಿಗದಿಗೆ ಕಬ್ಬಿನ ಇಳುವರಿ ಶೇ 10.25 ಬದಲು ಶೇ 9.5ರಷ್ಟನ್ನು ಆಧಾರವಾಗಿ ಪರಿಗಣಿಸಬೇಕು. ರಾಜ್ಯ ಸರ್ಕಾರಗಳು ಆಯಾ ಪ್ರದೇಶದ ಅನುಭವಕ್ಕೆ ಅನುಗುಣವಾಗಿ ಎಫ್‌ಆರ್‌ಪಿ ನಿಗದಿ ಮಾಡುವುದನ್ನು ಬೆಂಬಲಿಸಬೇಕು.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruSugarcaneFarmersEconomy


