BLR Today
ಗುರುವಾರ, ಅಕ್ಟೋಬರ್ 29, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru1 ಗಂಟೆಗಳ ಹಿಂದೆ

ಬಸ್ ಟಿಕೆಟ್ ದರ ಏರಿಕೆಗೆ ತಜ್ಞರ ಸಮಿತಿಯಿಂದಲೂ ಗ್ರೀನ್ ಸಿಗ್ನಲ್

ಬಸ್ ಟಿಕೆಟ್ ದರ ಏರಿಕೆಗೆ ತಜ್ಞರ ಸಮಿತಿಯಿಂದಲೂ ಗ್ರೀನ್ ಸಿಗ್ನಲ್
ಚಿತ್ರ: Public TV

ಬಸ್ ಟಿಕೆಟ್ ದರ ಏರಿಕೆಯ ಕುರಿತು ನಿವೃತ್ತ ಐಎಎಸ್ ಅಧಿಕಾರಿ ಅತುಲ್ ತಿವಾರಿ ವರದಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ವಿಚಾರದ ಬಗ್ಗೆ ಗುರುವಾರ (ಅ.29) ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. ವರದಿಯ ಪ್ರಕಾರ, KSRTC, NWKRTC, NEKRTC ಮೂರು ನಿಗಮಗಳಿಗೆ 25-26% ಏರಿಕೆ ಮತ್ತು ಬಿಎಂಟಿಸಿ ಟಿಕೆಟ್‌ ದರದಲ್ಲಿ 42% ಹೆಚ್ಚಳದ ಶಿಫಾರಸು ಮಾಡಲಾಗಿದೆ. ಆದರೆ ಪ್ರಯಾಣಿಕರ ಹಿತದೃಷ್ಟಿಯಿಂದ ಮೂರು ನಿಗಮಗಳ ಬಸ್ ದರ ಶೇ.13-15% ಏರಿಕೆ ಮತ್ತು ಬಿಎಂಟಿಸಿ ಬಸ್ ಟಿಕೆಟ್ ದರ ಶೇ.15-17% ರಷ್ಟು ಏರಿಕೆ ಸಾಧ್ಯತೆ ಇದೆ.

ಮೂಲ ವರದಿ: Public TV ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BMTCKSRTCNWKRTCNEKRTC