BLR Today
ಶುಕ್ರವಾರ, ಅಕ್ಟೋಬರ್ 2, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಹಬ್ಬದ ಸುದ್ದಿBengaluru2 ಗಂಟೆಗಳ ಹಿಂದೆ

ಬೆಂಗಳೂರಿನ ಹೊರವಲಯದ ವಲಗಮಾದಿ ಬಳಿ 'ಯುರೋಪಿಯನ್‌ ರೋಲರ್‌' ಪಕ್ಷಿ ಕಂಡುಬಂದಿದೆ

ಬೆಂಗಳೂರಿನ ಹೊರವಲಯದ ವಲಗಮಾದಿ ಬಳಿ 'ಯುರೋಪಿಯನ್‌ ರೋಲರ್‌' ಪಕ್ಷಿ ಕಂಡುಬಂದಿದೆ
ಚಿತ್ರ: Prajavani

ಬೆಂಗಳೂರಿನ ಹೊರವಲಯದ ವಲಗಮಾದಿ, ಅಜ್ಜಪಲ್ಲಿ ಬೆಟ್ಟದ ಸುತ್ತಮುತ್ತ ವಿದೇಶಿ ಹಕ್ಕಿಗಳ ಸಾಲಿನಲ್ಲಿ 'ಯುರೋಪಿಯನ್‌ ರೋಲರ್‌' ಪಕ್ಷಿಗಳು ಕಂಡುಬಂದಿವೆ. ಮಧ್ಯಪ್ರಾಚ್ಯ, ಯುರೋಪ್‌, ಮಧ್ಯ ಏಷ್ಯಾದಲ್ಲಿ ಕಾಣಸಿಗುವ ಈ ಪಕ್ಷಿಗಳು ಭಾರತದಲ್ಲಿ ಚಳಿಗಾಲ ಶುರುವಾಗುವ ಸಮಯದಲ್ಲಿ ಈ ಭಾಗಕ್ಕೆ ಬರುತ್ತವೆ. ನೂತನ ಅತಿಥಿಯನ್ನು ನೋಡಲು ಮುಂಜಾನೆ ಪಕ್ಷಿ ಪ್ರಿಯರು ಆಗಮಿಸುತ್ತಿದ್ದು, ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿದ್ದಾರೆ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
birdsBengaluruwildlifenature