ಬೆಂಗಳೂರಿನ ಕೆಪಿಎಸ್ಸಿ ನೇಮಕಾತಿಗಳ ಕುರಿತು ತನಿಖೆ ವಿಸ್ತರಿಸುತ್ತಿರುವ ಇಡಿ
ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು, ಕರ್ನಾಟಕ ಲೋಕಸೇವಾ ಆಯೋಗದ ಹಿಂದಿನ ನೇಮಕಾತಿ ಪ್ರಕ್ರಿಯೆಗಳ ಪರಿಶೀಲನೆಗೂ ಮುಂದಾಗಿದ್ದಾರೆ. ಈ ಪ್ರಕರಣದಲ್ಲಿ ಇ.ಡಿ ಕಸ್ಟಡಿಯಲ್ಲಿರುವ ಆಯೋಗದ ಹಿಂದಿನ ಪರೀಕ್ಷಾ ನಿಯಂತ್ರಕ ಘ್ಯಾನೇಂದ್ರ ಕುಮಾರ್ ಗಂಗ್ವಾರ್ ಅವರ ಅಧಿಕಾರದ ಅವಧಿಯಲ್ಲಿ ಒಟ್ಟು 13 ನೇಮಕಾತಿಗಳು ನಡೆದಿದ್ದವು. ಇದೇ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ, ಮಧ್ಯವರ್ತಿ ಬಸವರಾಜ ಕನ್ನಾಳೆ ಅವರ ಡೈರಿಯಲ್ಲಿ ಮೋಟಾರುವಾಹನ ನಿರೀಕ್ಷಕ ನೇಮಕಾತಿ ಪ್ರಕ್ರಿಯೆಯ ಅಭ್ಯರ್ಥಿಗಳ ಹೆಸರು ಇರುವುದನ್ನು ಪತ್ತೆ ಮಾಡಿತ್ತು. ಇ.ಡಿ ಅಧಿಕಾರಿಗಳೂ ಇದೇ ಜಾಡು ಹಿಡಿದಿದ್ದಾರೆ ಎಂದು ಗೊತ್ತಾಗಿದೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿಯಿಂದ, ಸಂಬಂಧಿತ ದಾಖಲೆಗಳನ್ನು ಪಡೆದುಕೊಳ್ಳುವ ಬಗ್ಗೆ ಇ.ಡಿ ಸಿದ್ಧತೆ ನಡೆಸುತ್ತಿದೆ ಎಂದು ಗೊತ್ತಾಗಿದೆ.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
Enforcement DirectorateKPSCBengaluruAppointmentsInvestigation


