BLR Today
ಶುಕ್ರವಾರ, ಅಕ್ಟೋಬರ್ 30, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru3 ಗಂಟೆಗಳ ಹಿಂದೆ

ಡಿಪಿಎಸ್ ಶಾಲಾ ಹಾಕಿ ಕ್ಲಬ್ ಟೂರ್ನಿಯ ಚಾಂಪಿಯನ್‌ಗಳು

ಡಿಪಿಎಸ್ ಶಾಲಾ ಹಾಕಿ ಕ್ಲಬ್ ಟೂರ್ನಿಯ ಚಾಂಪಿಯನ್‌ಗಳು
ಚಿತ್ರ: Prajavani

ದೆಹಲಿ ಪಬ್ಲಿಕ್ ಶಾಲೆ (ಡಿಪಿಎಸ್) ಹಾಕಿ ಕ್ಲಬ್ ತಂಡವು ಬುಧವಾರ ಮುಕ್ತಾಯವಾದ ಡಿ.ಎಸ್. ಮೂರ್ತಿ ಸ್ಮಾರಕ ಟ್ರೋಫಿ ಹಾಕಿ ಟೂರ್ನಿಯ ಚಾಂಪಿಯನ್‌ ಆಗಿ ಹೊರಹೊಮ್ಮಿತು. ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ ಆಯೋಜಿಸಿದ್ದ ಟೂರ್ನಿಯ ಫೈನಲ್‌ನಲ್ಲಿ ಡಿಪಿಎಸ್ ತಂಡವು 3–1ರಿಂದ ರೈಸಿಂಗ್‌ ಸ್ಟಾರ್‌ ಹಾಕಿ ಕ್ಲಬ್‌ ತಂಡದ ವಿರುದ್ಧ ಜಯ ಸಾಧಿಸಿತು. ತೃತೀಯ ಸ್ಥಾನದ ನಿರ್ಣಯಕ್ಕಾಗಿ ನಡೆದ ಪಂದ್ಯದಲ್ಲಿ ಟೀಮ್‌ ವೈಲ್ಡ್‌ ಬೋರ್ಡ್‌ ತಂಡವು 6–1ರಿಂದ ಬಿಸಿವೈಎ ತಂಡದ ವಿರದ್ಧ ನಿರಾಯಾಸ ಗೆಲುವು ಸಾಧಿಸಿತು. ವೈಯಕ್ತಿಕ ಪ್ರಶಸ್ತಿಗಳು: ಉತ್ತಮ ಗೋಲ್‌ಕೀಪರ್‌: ಅಲನ್‌ ಜೋಯಲ್‌ (ರೈಸಿಂಗ್‌ ಸ್ಟಾರ್‌); ಉತ್ತಮ ಡಿಫೆಂಡರ್‌: ಕವನ್‌ ರೈ (ರೈಸಿಂಗ್‌ ಸ್ಟಾರ್‌); ಉತ್ತಮ ಮಿಡ್‌ಫೀಲ್ಡರ್‌: ಪ್ರತೀಕ್‌ ಮೊನ್ನಪ್ಪ (ಟೀಮ್‌ ವೈಲ್ಡ್‌ಬೋರ್‌).

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruSportsHockey