BLR Today
ಶುಕ್ರವಾರ, ನವೆಂಬರ್ 27, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru3 ಗಂಟೆಗಳ ಹಿಂದೆ

ಡಿಪಿಎಸ್ ಮತ್ತು ಲಯೋಲಾ ಶಾಲೆಗಳು ಪ್ರಕೃಮಿ ಚಾಂಪಿಯನ್ಸ್ ಲೀಗ್ ಫುಟ್‌ಬಾಲ್ ಫೈನಲ್‌ಗೆ ಪ್ರವೇಶ

ಡಿಪಿಎಸ್ ಮತ್ತು ಲಯೋಲಾ ಶಾಲೆಗಳು ಪ್ರಕೃಮಿ ಚಾಂಪಿಯನ್ಸ್ ಲೀಗ್ ಫುಟ್‌ಬಾಲ್ ಫೈನಲ್‌ಗೆ ಪ್ರವೇಶ
ಚಿತ್ರ: Prajavani

ದೆಹಲಿ ಪಬ್ಲಿಕ್‌ ಶಾಲೆ (ಉತ್ತರ) ಮತ್ತು ಗೋವಾದ ಮಡಗಾಂವ್‌ನ ಲಯೊಲಾ ಪ್ರೌಢಶಾಲಾ ತಂಡಗಳು 14ನೇ ಆವೃತ್ತಿಯ ಪ್ರಕೃಮಿ ಚಾಂಪಿಯನ್ಸ್ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದವು. 16 ವರ್ಷದೊಳಗಿನವರ ಈ ಅಂತರಶಾಲಾ ಲೀಗ್‌ನ ಸೆಮಿಫೈನಲ್‌ ನಲ್ಲಿ ದೆಹಲಿ ಪಬ್ಲಿಕ್‌ ಶಾಲೆ (ಉತ್ತರ) ತಂಡವು 2–0 ಗೋಲುಗಳಿಂದ ದೆಹಲಿ ಪಬ್ಲಿಕ್‌ ಶಾಲೆ (ಬೆಂಗಳೂರು ಪೂರ್ವ) ತಂಡವನ್ನು ಮಣಿಸಿತು. ಮತ್ತೊಂದು ಸೆಮಿಫೈನಲ್‌ನಲ್ಲಿ ಲಯೊಲಾ ತಂಡವು 4–3ರಿಂದ ಹೆಡ್ ಸ್ಟಾರ್ಟ ಶಿಕ್ಷಣ ಅಕಾಡೆಮಿ ತಂಡವನ್ನು ಮಣಿಸಿತು. ಶುಕ್ರವಾರ ಫೈನಲ್‌ ಹಣಾಹಣಿ ನಡೆಯಲಿದೆ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruSportsEducation