BLR Today
ಮಂಗಳವಾರ, ಅಕ್ಟೋಬರ್ 13, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru4 ಗಂಟೆಗಳ ಹಿಂದೆ

ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ ಕಾದಂಬರಿಗಳ ಬಗ್ಗೆ ಸಂವಾದ

ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ ಕಾದಂಬರಿಗಳ ಬಗ್ಗೆ ಸಂವಾದ
ಚಿತ್ರ: Prajavani

ದೊಮ್ಮಲೂರಿನಲ್ಲಿರುವ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರವು (ಬಿಐಸಿ) ಇದೇ 14ರಂದು ಸಂಜೆ 6.30ಕ್ಕೆ ಎಂ.ಕೆ. ಶಂಕರ್‌ ಹಾಗೂ ಎಂ.ಎಸ್‌. ಮೂರ್ತಿ ಅವರ ಇಂಗ್ಲಿಷ್ ಕಾದಂಬರಿಗಳ ಬಗ್ಗೆ ಸಂವಾದ ಗೋಷ್ಠಿ ಹಮ್ಮಿಕೊಂಡಿದೆ. ಎಂ.ಕೆ. ಶಂಕರ್‌ ಅವರ ಇಂಗ್ಲಿಷ್‌ನಲ್ಲಿ ಬರೆದ ‘ದ ಕಾನ್‌ವರ್ಟ್’ ಹಾಗೂ ಎಂ.ಎಸ್‌. ಮೂರ್ತಿ ಅವರ ಕನ್ನಡ ಕಾದಂಬರಿಯ ಇಂಗ್ಲಿಷ್‌ ಅನುವಾದ ‘ಬಿಕ್ಕು ಆ್ಯಂಡ್‌ ಹಿಸ್ ಬೌಲ್‌’ ಎರಡೂ ಕಾದಂಬರಿಗಳ ಕುರಿತು ಸಂವಾದ ನಡೆಯಲಿದೆ. ಸಿನಿಮಾ ವಿಮರ್ಶಕ ಎನ್‌. ವಿದ್ಯಾಶಂಕರ್‌ ಅವರು ಸಂವಾದ ನಡೆಸಿಕೊಡಲಿದ್ದಾರೆ. ಈ ಸಂವಾದ ಕಾರ್ಯಕ್ರಮಕ್ಕೆ ಪ್ರವೇಶ ಉಚಿತ ಎಂದು ಪ್ರಕಟಣೆ ತಿಳಿಸಿದೆ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruLiteratureBICDiscussion