‘ಧುತ್ತರಗಿ ನಾಟಕೋತ್ಸವ’ ರವೀಂದ್ರ ಕಲಾಕ್ಷೇತ್ರದಲ್ಲಿ ಆಗಸ್ಟ್ 24 ಮತ್ತು 25 ರಂದು ಆಯೋಜನೆ
ಹನುಮಸಾಗರದಲ್ಲಿ ನಿಸರ್ಗ ಸಂಗೀತ ವಿದ್ಯಾಲಯ ಹಾಗೂ ರಂಗ ಕಲಾವಿದರ ಸಂಘದಿಂದ ಕರ್ನಾಟಕ ನಾಟಕ ಅಕಾಡೆಮಿಯ ಆಶ್ರಯದಲ್ಲಿ ಖ್ಯಾತ ನಾಟಕಕಾರ, ಕವಿ ಹಾಗೂ ರಂಗಕರ್ಮಿ ದಿವಂಗತ ಪಿ.ಬಿ. ಧುತ್ತರಗಿ ಮತ್ತು ಅವರ ಪತ್ನಿ, ಹೆಸರಾಂತ ರಂಗನಟಿ ದಿವಂಗತ ಸರೋಜಮ್ಮ ಧುತ್ತರಗಿ ಅವರ ಸ್ಮರಣಾರ್ಥ ಅ.24 ಮತ್ತು 25ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಧುತ್ತರಗಿ ನಾಟಕೋತ್ಸವ’ ಆಯೋಜಿಸಲಾಗಿದೆ. ಈ ನಾಟಕೋತ್ಸವದಲ್ಲಿ ಪಿ.ಬಿ. ಧುತ್ತರಗಿ ಅವರ ರಚನೆಯ ಮೂರು ನಾಟಕಗಳು ಪ್ರದರ್ಶನಗೊಳ್ಳಲಿದ್ದು, ರಂಗಭೂಮಿಗೆ ಗಣನೀಯ ಕೊಡುಗೆ ನೀಡಿದ ಸಾಧಕರಿಗೆ ‘ಶ್ರೀ ಪಿ.ಬಿ. ಧುತ್ತರಗಿ ರಂಗ ಸನ್ಮಾನ ಪ್ರಶಸ್ತಿ’ ಪ್ರದಾನ ಮಾಡಲಾಗುತ್ತದೆ. ಅ.24ರಂದು ಸಂಜೆ 6 ಗಂಟೆಗೆ ಜಗದಾಳದ ಶ್ರೀ ಮಲ್ಲಿಕಾರ್ಜುನ ನಾಟ್ಯ ಸಂಘದ ಕಲಾವಿದರು ‘ವೀರ ಸಿಂಧೂರ ಲಕ್ಷ್ಮಣ’ ನಾಟಕವನ್ನು ಪ್ರದರ್ಶಿಸಲಿದ್ದಾರೆ. ಅ.25ರಂದು ಬೆಳಿಗ್ಗೆ 11 ಗಂಟೆಗೆ ಹನುಮಸಾಗರದ ನಿಸರ್ಗ ರಂಗ ಕಲಾವಿದರು, ರಂಗಕರ್ಮಿ ವಿರೂಪಾಕ್ಷಪ್ಪ ಧುತ್ತರಗಿ ಅವರ ನಿರ್ದೇಶನದಲ್ಲಿ ‘ಚಿಕ್ಕ ಸೊಸೆ’ ನಾಟಕವನ್ನು ಪ್ರಸ್ತುತಪಡಿಸಲಿದ್ದಾರೆ.


