ರೈಲ್ವೆ ನಿಲ್ದಾಣದ ಬಳಿ ಅಂಡರ್‌ಪಾಸ್‌ನಲ್ಲಿ ಮುರಿದ ಚರಂಡಿ ಗ್ರೀಲ್‌ಗಳಿಂದ ವಾಹನ ಸವಾರರಿಗೆ ಆತಂಕ
ನಗರದ ರೈಲ್ವೆ ನಿಲ್ದಾಣದ ಮೂಲಕ ಹಿಂದೂಪುರ– ಯಲಹಂಕ ರಾಜ್ಯ ಹೆದ್ದಾರಿ ಸಂಪರ್ಕಿಸುವ ಅಂಡರ್ ಪಾಸ್‌ನಲ್ಲಿ ಮಳೆ ನೀರು ಹರಿದು ಹೋಗಲು ಚರಂಡಿಗೆ ಅಳವಡಿಸಿರುವ ಗ್ರೀಲ್‌ಗಳು ಮುರಿದಿದ್ದು ಬೈಕ್, ವಾಹನ ಸವಾರರು ಆತಂಕದಲ್ಲೇ ಸಂಚರಿಸುತ್ತಿದ್ದಾರೆ. ನಗರದ ಬಸ್ ನಿಲ್ದಾಣದಿಂದ ಬೆಂಗಳೂರು, ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶ ಸೇರಿದಂತೆ ಹಲವಾರು ಕಡೆಗಳಿಗೆ ಸಂಪರ್ಕ ಕಲ್ಪಿಸುವ ರೈಲ್ವೆ ನಿಲ್ದಾಣದ ಸಮೀಪದಲ್ಲಿ ಹೊಸದಾಗಿ ನಿರ್ಮಿಸಿರುವ ಅಂಡರ್ ಪಾಸ್ ವಾಹನ ಸವಾರರ ಪಾಲಿಗೆ ಅಪಾಯದ ರಸ್ತೆಯಾಗಿ ಪರಿಣಮಿಸಿದೆ. ಗಾಬರಿ ಹುಟ್ಟಿಸುವ ಶಬ್ದ ಅಂಡರ್‌ಪಾಸ್ ಬಳಿ ಮಳೆ ನೀರು ಹರಿದು ಹೋಗಲು ನಿರ್ಮಿಸಿರುವ ಗ್ರೀಲ್‌ಗಳು ಮುರಿದಿರುವುದರಿಂದ ಬೈಕ್ ಸೇರಿದಂತೆ ಯಾವುದೇ ವಾಹನ ಹೋದಾಗ ದಢಕ್ಕ್ ಎನ್ನುವ ಕರ್ಕಶ ಶಬ್ದ ಬೆಚ್ಚಿಬಿಳಿಸುತ್ತಿದೆ.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruInfrastructureCommuter Safety


