BLR Today
ಸೋಮವಾರ, ಅಕ್ಟೋಬರ್ 5, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru2 ಗಂಟೆಗಳ ಹಿಂದೆ

ಬೆಂಗಳೂರಿನ ಕೆರೆ, ಉದ್ಯಾನಗಳ ಸಂರಕ್ಷಣೆಗೆ ಸೈಕಲ್ ಜಾಥಾ ಆಯೋಜನೆ

ಬೆಂಗಳೂರಿನ ಕೆರೆ, ಉದ್ಯಾನಗಳ ಸಂರಕ್ಷಣೆಗೆ ಸೈಕಲ್ ಜಾಥಾ ಆಯೋಜನೆ
ಚಿತ್ರ: Prajavani

ಕೆರೆ, ಉದ್ಯಾನಗಳ ಸಂರಕ್ಷಣೆಗಾಗಿ 'ಗ್ರೇಟರ್ ಬೆಂಗಳೂರು ಕೆರೆಗಳು, ಉದ್ಯಾನ ಸಂರಕ್ಷಣೆ ಜನ ಜಾಗೃತಿ ಸಮಿತಿ' ಭಾನುವಾರ ನಗರದ ವಿವಿಧೆಡೆ ಸೈಕಲ್ ಜಾಥಾ ಆಯೋಜಿಸಿತ್ತು. ಮಡಿವಾಳದಲ್ಲಿ ನಿವೃತ್ತ ಐಎಫ್‌ಎಸ್ ಅಧಿಕಾರಿ ಎ.ಎನ್.ಯಲ್ಲಪ್ಪರೆಡ್ಡಿ, ಅಶೋಕ ಸ್ತಂಭದ ಬಳಿ ಶಾಸಕ ಉದಯ್‌ ಗರುಡಾಚಾರ್ ಮತ್ತು ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಜಾಥಾಕ್ಕೆ ಚಾಲನೆ ನೀಡಿದರು. ಸವಾರರು 'ಹೆಬ್ಬಾಳ ಕೆರೆ ಒಣಗಿದೆ. ಕೆರೆಗಳ ಬಲಿ ಬೇಡುವ ಸುರಂಗ ರಸ್ತೆ ಬೇಡ' ಮತ್ತು 'ಸುರಂಗ ಯಂತ್ರದಿಂದ ಕಂಪನ.. ಲಾಲ್‌ಬಾಗ್ ಕೆರೆಗೆ ಕಂಟಕ' ಮೊದಲಾದ ಭಿತ್ತಿಪತ್ರಗಳನ್ನು ಸೈಕಲ್‌ ಮೇಲಿರಿಸಿಕೊಂಡು ಜಾಗೃತಿ ಮೂಡಿಸಿದರು. ಸಿಲ್ಕ್‌ಬೋರ್ಡ್‌ನ ಕೆಎಸ್‌ಆರ್‌ಪಿ ಜಂಕ್ಷನ್, ಜಯನಗರದ ಅಶೋಕ ಸ್ತಂಭ, ಲಾಲ್‌ಬಾಗ್‌ ಪಶ್ಚಿಮ ದ್ವಾರ, ಕೃಂಬಿಗಲ್ ರಸ್ತೆ, ಮಿನರ್ವ ವೃತ್ತ, ಜೆ.ಸಿ.ರಸ್ತೆ, ಪುರಭವನ, ಹಡ್ಸನ್ ವೃತ್ತ, ಕಬ್ಬನ್ ಉದ್ಯಾನದ ಮುಖ್ಯದ್ವಾರ, ಕೆಂಪೇಗೌಡ ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ರೇಸ್‌ಕೋರ್ಸ್ ರಸ್ತೆ, ರೈಲ್ವೆ ಸಮಾನಾಂತರ ರಸ್ತೆ, ಮೇಖ್ರಿ ವೃತ್ತ ಮಾರ್ಗವಾಗಿ ಹೆಬ್ಬಾಳದ ಎಸ್ಟೀಮ್‌ ಮಾಲ್‌ವರೆಗೆ ಜಾಥಾ ಸಾಗಿತು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruLakesParksEnvironmentCycle Rally