BLR Today
ಮಂಗಳವಾರ, ಅಕ್ಟೋಬರ್ 6, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಅಪರಾಧBengaluru1 ಗಂಟೆಗಳ ಹಿಂದೆ

ಪವಿತ್ರಾ ಗೌಡ ವರ್ಗಾವಣೆ ಮತ್ತು ನೈಜಿರಿಯನ್ ರಾಷ್ಟ್ರೀಯರ ಕಿರುಕುಳದ ಕುರಿತು ನ್ಯಾಯಾಲಯದ ಪ್ರಶ್ನೆ

ಪವಿತ್ರಾ ಗೌಡ ವರ್ಗಾವಣೆ ಮತ್ತು ನೈಜಿರಿಯನ್ ರಾಷ್ಟ್ರೀಯರ ಕಿರುಕುಳದ ಕುರಿತು ನ್ಯಾಯಾಲಯದ ಪ್ರಶ್ನೆ
ಚಿತ್ರ: Kannada Prabha

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟಿ ಪವಿತ್ರಾ ಗೌಡ ಅವರಿಗೆ ನೈಜಿರಿಯನ್ ಪ್ರಜೆಗಳ ಕಾಟದ ಬಗ್ಗೆ ಕೋರ್ಟ್‌ನಲ್ಲಿ ಮಾಹಿತಿ ನೀಡಿದ್ದಾರೆ. ಬ್ಯಾರಕ್ ಬದಲಾವಣೆ ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಅಸ್ತು ಎಂದಿದ್ದ ಕೋರ್ಟ್, ಬ್ಯಾರಕ್ ಬದಲಾಯಿಸುವಂತೆ ಸೂಚನೆ ನೀಡಿತ್ತು. ಆದರೆ ಇದುವರೆಗೂ ಬೇರೆ ಬ್ಯಾರಕ್ ಗೆ ಶಿಫ್ಟ್ ಮಾಡಿ ವರದಿ ಸಲ್ಲಿಸದ ಜೈಲಾಧಿಕಾರಿಗಳ ವಿರುದ್ಧ ಕೋರ್ಟ್ ಗರಂ ಆಗಿದೆ. ಇಂದು ವರದಿ ಸಲ್ಲಿಸುವಂತೆ ಜೈಲಾಧಿಕಾರಿಗಳಿಗೆ ಕೋರ್ಟ್ ಡೆಡ್ ಲೈನ್ ನೀಡಿದೆ.

ಮೂಲ ವರದಿ: Kannada Prabha ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
Pavithra GowdaDarsanParappan Angrahara JailCourtCrime