ಕೊಬ್ಬರಿ ಬೆಲೆ ಕ್ವಿಂಟಲ್‌ಗೆ ಸುಮಾರು ₹3 ಸಾವಿರ ಇಳಿಕೆ: ರೈತ ಕಂಗಾಲು
ಮಾರುಕಟ್ಟೆಯಲ್ಲಿ ಬೇಡಿಕೆಗಿಂತ ಪೂರೈಕೆ ಹೆಚ್ಚಾಗಿರುವುದು ಹಾಗೂ ತಮಿಳುನಾಡಿಗೆ ಕೊಬ್ಬರಿ ಆವಕ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ತಿಪಟೂರು ಮತ್ತು ಅರಸೀಕೆರೆಯಲ್ಲಿ ಉಂಡೆ ಕೊಬ್ಬರಿ ಬೆಲೆ ದಿಢೀರ್ ಕುಸಿದಿದೆ. ಕಳೆದ ಜುಲೈನಲ್ಲಿ ತಿಪಟೂರು ಅರಸೀಕೆರೆ ಕೊಬ್ಬರಿ ಕ್ವಿಂಟಲ್‌ಗೆ ₹31,866ರಿಂದ ₹32,288ರವರೆಗೆ ಇದ್ದ ಕೊಬ್ಬರಿ ದರ, ಇದೀಗ ₹28 ಸಾವಿರದ ಆಸುಪಾಸಿಗೆ ಇಳಿದಿದೆ. ಬುಧವಾರ ಅರಸೀಕೆರೆ ಮಾರುಕಟ್ಟೆಯಲ್ಲಿ ಕ್ವಿಂಟಲ್ ಕೊಬ್ಬರಿ ₹28,030ಕ್ಕೆ ಮಾರಾಟವಾಗಿದ್ದರೆ, ಗುರುವಾರ ತಿಪಟೂರು ಮಾರುಕಟ್ಟೆಯಲ್ಲಿ ₹27,900ಕ್ಕೆ ವಹಿವಾಟಾಗಿದೆ.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
copraagriculturepricesBengaluru


