BLR Today
ಗುರುವಾರ, ನವೆಂಬರ್ 19, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru5 ದಿನಗಳ ಹಿಂದೆ

ಬೆಮಲ್ ಘಟಕದಲ್ಲಿ ಗುತ್ತಿಗೆ ಕಾರ್ಮಿಕರ ದಿಢೀರ್ ಮುಷ್ಕರ ಆರಂಭ

ಬೆಮಲ್ ಘಟಕದಲ್ಲಿ ಗುತ್ತಿಗೆ ಕಾರ್ಮಿಕರ ದಿಢೀರ್ ಮುಷ್ಕರ ಆರಂಭ
ಚಿತ್ರ: Prajavani

ಕೆಜಿಎಫ್: ವೇತನ ಪರಿಷ್ಕರಣೆ ಮಾಡುವುದಾಗಿ ಭರವಸೆ ನೀಡಿದ ಬೆಮಲ್ ಆಡಳಿತ ವರ್ಗ, ವೇತನ ಪರಿಷ್ಕರಣೆ ಮಾಡದೆ ಕಾರ್ಮಿಕರನ್ನು ವಂಚಿಸುತ್ತಿದೆ ಎಂದು ಆರೋಪಿಸಿ ನೂರಾರು ಗುತ್ತಿಗೆ ನೌಕರರು ಶುಕ್ರವಾರ ದಿಢೀರ್ ಮುಷ್ಕರ ಆರಂಭಿಸಿದ್ದಾರೆ. ಮೊದಲ ಶಿಫ್ಟ್‌ನಲ್ಲಿ ಒಳಗೆ ಹೋದ ಸುಮಾರು 750 ಕಾರ್ಮಿಕರು ಶಿಫ್ಟ್ ಮುಗಿದ ಮೇಲೆ ಹೊರಗೆ ಬರದೆ, ಕಾರ್ಖಾನೆಯೊಳಗೆ ಕುಳಿತು ಪ್ರತಿಭಟನೆ ಶುರು ಮಾಡಿದ್ದಾರೆ. ಎರಡನೇ ಶಿಫ್ಟ್‌ನಲ್ಲಿ ಕಾರ್ಖಾನೆಯೊಳಗೆ ಹೋಗಲು ಮಧ್ಯಾಹ್ನ ಬಂದ ಇತರ ಕಾರ್ಮಿಕರನ್ನು ಭದ್ರತಾ ಸಿಬ್ಬಂದಿ ಒಳಗೆ ಬಿಡಲಿಲ್ಲ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
strikelaborBemelwage revision