BLR Today
ಶನಿವಾರ, ನವೆಂಬರ್ 7, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru36 ನಿಮಿಷಗಳ ಹಿಂದೆ

ಕೇವಲ 1.6 ಕಿಮೀ ಕಾಮಗಾರಿಗೆ 18 ತಿಂಗಳು ಕೆಐಎ ರಸ್ತೆ ಬಂದ್, ಪರ್ಯಾಯ ರೋಡ್‌ ಕಥೆ ಒಂದೆರಡಲ್ಲ, ಯಾವ ಮಾರ್ಗದಲ್ಲಿ ಏನೇನು ಸಮಸ್ಯೆ?

ಕೇವಲ 1.6 ಕಿಮೀ ಕಾಮಗಾರಿಗೆ 18 ತಿಂಗಳು ಕೆಐಎ ರಸ್ತೆ ಬಂದ್, ಪರ್ಯಾಯ ರೋಡ್‌ ಕಥೆ ಒಂದೆರಡಲ್ಲ, ಯಾವ ಮಾರ್ಗದಲ್ಲಿ ಏನೇನು ಸಮಸ್ಯೆ?
ಚಿತ್ರ: Asianet Suvarna News

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಯುಎಎಸ್ ಸ್ಟಾಫ್ ಕ್ವಾರ್ಟರ್ಸ್ ನಿಂದ ಮೆಖ್ರಿ ಸರ್ಕಲ್ ವರೆಗೆ ಸುಮಾರು 1.6 ಕಿಲೋಮೀಟರ್ ಉದ್ದದ ನಾಲ್ಕು ಪಥಗಳ ಎತ್ತರಿಸಿದ ಕಾರಿಡಾರ್ ನಿರ್ಮಿಸಲಾಗುತ್ತಿದ್ದು, ಕಾಮಗಾರಿ ಪೂರ್ಣಗೊಳಿಸಲು 18 ತಿಂಗಳ ಕಾಲಾವಕಾಶ ನಿಗದಿಪಡಿಸಲಾಗಿದೆ. ಈ ಯೋಜನೆಯಿಂದಾಗಿ ಕೆಐಎ ರಸ್ತೆ, ಬಳ್ಳಾರಿ ರೋಡ್ ನಲ್ಲಿ ಸಂಚಾರ ನಿರ್ಬಂಧ ಜಾರಿಯಾದರೆ, ವಿಮಾನ ನಿಲ್ದಾಣ ಮತ್ತು ನಗರದ ವಿವಿಧ ಭಾಗಗಳ ನಡುವೆ ಸಂಚರಿಸುವ ವಾಹನಗಳು ಪರ್ಯಾಯ ಮಾರ್ಗಗಳನ್ನು ಅವಲಂಬಿಸಬೇಕಾಗುತ್ತದೆ. ಆದರೆ, ಪರ್ಯಾಯ ರಸ್ತೆಗಳಲ್ಲಿ ಈಗಾಗಲೇ ಮೆಟ್ರೋ ಕಾಮಗಾರಿ, ರಸ್ತೆ ದುರಸ್ತಿ, ಪೈಪ್ ಲೈನ್ ಮತ್ತು ಭೂಗತ ವಿದ್ಯುತ್ ಕೇಬಲ್ ಅಳವಡಿಕೆ ಸೇರಿದಂತೆ ಹಲವು ಕೆಲಸಗಳು ನಡೆಯುತ್ತಿವೆ.

ಮೂಲ ವರದಿ: Asianet Suvarna News ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruTrafficInfrastructureKIA Airport RoadMetroConstruction