BLR Today
ಮಂಗಳವಾರ, ಸೆಪ್ಟೆಂಬರ್ 29, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru3 ಗಂಟೆಗಳ ಹಿಂದೆ

ಚನ್ನಪಟ್ಟಣದ ಯೋಗೇಶ್ ಚಕ್ಕೆರೆ ಮತ್ತು ಹೇಮಲತಾ ಬೆಂಗಳೂರಿನ ಕಾರ್ಯಕ್ರಮದಲ್ಲಿ 'ನೇಷನ್ ಬಿಲ್ಡರ್ ಅವಾರ್ಡ್' ಪಡೆದರು

ಚನ್ನಪಟ್ಟಣದ ಯೋಗೇಶ್ ಚಕ್ಕೆರೆ ಮತ್ತು ಹೇಮಲತಾ ಬೆಂಗಳೂರಿನ ಕಾರ್ಯಕ್ರಮದಲ್ಲಿ 'ನೇಷನ್ ಬಿಲ್ಡರ್ ಅವಾರ್ಡ್' ಪಡೆದರು
ಚಿತ್ರ: Prajavani

ಚನ್ನಪಟ್ಟಣದ ಚಕ್ಕೆರೆ ಕರ್ನಾಟಕ ಪಬ್ಲಿಕ್ ಶಾಲೆ ಮುಖ್ಯ ಶಿಕ್ಷಕ ಯೋಗೇಶ್ ಚಕ್ಕೆರೆ ಮತ್ತು ನಗರದ ಜ್ಞಾನ ಸರೋವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಹೇಮಲತಾ ಅವರು 'ನೇಷನ್ ಬಿಲ್ಡರ್ ಅವಾರ್ಡ್' ಪಡೆದಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ವ್ಯಕ್ತಿತ್ವ ವಿಕಸನ ಹಾಗೂ ವಿವಿಧ ಸೃಜನಾತ್ಮಕ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿರುವ ಸೇವೆ ಗುರುತಿಸಿ ರೋಟರಿ ಸಂಸ್ಥೆಯಿಂದ ಈ ಪ್ರಶಸ್ತಿ ನೀಡಲಾಗಿದೆ. ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನ ಡಾ.ಎಚ್.ಎನ್.ಮಲ್ಟಿಮೀಡಿಯಾ ಹಾಲ್‌ನಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಇವರ ಜತೆಗೆ ಇನ್ನೂ ಇಬ್ಬರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruChannapatanaAwardEducation