ಪ್ರೀಮಿಯಂ ವಿನಾಯಿತಿ ಮತ್ತು ಜೀವ ವಿಮಾ ಯೋಜನೆಗಳನ್ನು ಬಿಡುಗಡೆ ಮಾಡಿದೆ ಸೆಂಟ್ರಲ್ ಲೈಫ್ ಇನ್ಶುರೆನ್ಸ್
ಆಕಸ್ಮಿಕವಾಗಿ ಸಂಪೂರ್ಣ ಅಥವಾ ಶಾಶ್ವತ ಅಂಗವೈಕಲ್ಯ ಅಥವಾ ಗಂಭೀರ ಕಾಯಿಲೆಗೆ ತುತ್ತಾದ ಗ್ರಾಹಕರಿಗೆ ಪ್ರೀಮಿಯಂ ಪಾವತಿಯಿಂದ ವಿನಾಯಿತಿ ನೀಡುವ ಸೌಲಭ್ಯವನ್ನು ಸೆಂಟ್ರಲ್ ಲೈಫ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಕಲ್ಪಿಸಿದೆ. ಮಕ್ಕಳ ಭವಿಷ್ಯದ ಯೋಜನೆಗಾಗಿ ಜೀವ ವಿಮಾ ಪರಿಹಾರಗಳನ್ನು ಒಳಗೊಂಡ ಯೋಜನೆಗಳನ್ನು ಸಹ ಆರಂಭಿಸಲಾಗಿದೆ. ಸೆಂಟ್ರಲ್ ಲೈಫ್ ಇನ್ಶುರೆನ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಅಲೋಕ್ ರುಂಗ್ಟಾ ಮಾತನಾಡಿ, 'ಮನಿ ಬ್ಯಾಕ್ ಸೂಪರ್ ಪ್ಲಾನ್', 'ಅಶ್ಯೂರ್ಡ್ ಎಜುಕೇಶನ್ ಪ್ಲಾನ್', 'ಸುನೆಹರಾ ಪಿಂಚಣಿ ಯೋಜನೆ' ಮತ್ತು 'ಲೈಫ್‌ಟೈಮ್ ಪಾರ್ಟ್‌ನರ್ ಪ್ಲಾನ್' ಸೇರಿದಂತೆ ಹಲವು ಯೋಜನೆಗಳನ್ನು ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
insurancefinanceBengaluru


