BLR Today
ಸೋಮವಾರ, ನವೆಂಬರ್ 9, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ರಾಜಕೀಯBengaluru53 ನಿಮಿಷಗಳ ಹಿಂದೆ

ಸ್ಟಿಂಗ್ ಆಪರೇಷನ್ ಕೇಸ್: ವಿಚಾರಣೆಗೆ ಹಾಜರಾಗುವಂತೆ ಕೃಪಾ ಆಳ್ವಾಗೆ ಸಿಸಿಬಿ ನೋಟಿಸ್

ಸ್ಟಿಂಗ್ ಆಪರೇಷನ್ ಕೇಸ್: ವಿಚಾರಣೆಗೆ ಹಾಜರಾಗುವಂತೆ ಕೃಪಾ ಆಳ್ವಾಗೆ ಸಿಸಿಬಿ ನೋಟಿಸ್
ಚಿತ್ರ: TV9 Kannada

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ಕೇಸ್ ಸಂಬಂಧ ಇಂದು ವಿಚಾರಣೆಗೆ ಹಾಜರಾಗುವಂತೆ ಕೃಪಾ ಆಳ್ವಾಗೆ ಸಿಸಿಬಿ ನೋಟಿಸ್ ನೀಡಿದೆ. ಮೊಬೈಲ್, ಲ್ಯಾಪ್‌ಟಾಪ್ ಸಮೇತ ಹಾಜರಾಗುವಂತೆ ಸೂಚಿಸಲಾಗಿದೆ. ಪೂರ್ವ ನಿಯೋಜಿತ ಟ್ರಿಪ್ ಹಿನ್ನೆಲೆ ವಿದೇಶಕ್ಕೆ ತೆರಳಿದ್ದ ಕೃಪಾಆಳ್ವಾ, ನ.7ರಂದು ರಾತ್ರಿ ಕೆಂಪೇಗೌಡ ಏರ್​ಪೋರ್ಟ್​ಗೆ ವಾಪಸ್​​ ಆಗಿದ್ದಾರೆ. ಮೊದಲೇ ಕೃಪಾ ಆಳ್ವಾ ವಿರುದ್ಧ ಸಿಸಿಬಿ ಟೀಂ LOC ಜಾರಿ ಮಾಡಿದ್ದ ಹಿನ್ನೆಲೆ ಏರ್​ಪೋರ್ಟ್ ಎಮಿಗ್ರೇಷನ್ ಅಧಿಕಾರಿಗ ಅವರನ್ನುಳು ವಶಕ್ಕೆ ಪಡೆದಿದ್ದರು. ಬಳಿಕ ಸಿಸಿಬಿ ಸೈಬರ್ ಇನ್ಸ್​ಪೆಕ್ಟರ್ ಸತೀಶ್ ವಶಕ್ಕೆ ನೀಡಲಾಗಿತ್ತು.

ಮೂಲ ವರದಿ: TV9 Kannada ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
CBIKripa AlvaSiddaramaiahSting OperationBengaluru