BLR Today
ಶುಕ್ರವಾರ, ಅಕ್ಟೋಬರ್ 16, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಹಬ್ಬದ ಸುದ್ದಿBengaluru3 ಗಂಟೆಗಳ ಹಿಂದೆ

‘ಹಾಮಾನಾ ಕನ್ನಡ ಜಾಗೃತಿ ಪುಸ್ತಕ ಬಹುಮಾನ’ಕ್ಕಾಗಿ ಕೃತಿಗಳ ಆಹ್ವಾನ

‘ಹಾಮಾನಾ ಕನ್ನಡ ಜಾಗೃತಿ ಪುಸ್ತಕ ಬಹುಮಾನ’ಕ್ಕಾಗಿ ಕೃತಿಗಳ ಆಹ್ವಾನ
ಚಿತ್ರ: Prajavani

ಕನ್ನಡ ಗೆಳೆಯರ ಬಳಗವು ಬರಹಗಾರ ಡಾ. ಹಾ.ಮಾ.ನಾಯಕರ ನೆನಪಿನಲ್ಲಿ ನೀಡುವ ‘ಹಾಮಾನಾ ಕನ್ನಡ ಜಾಗೃತಿ ಪುಸ್ತಕ ಬಹುಮಾನ’ಕ್ಕೆ ಕೃತಿಗಳನ್ನು ಆಹ್ವಾನಿಸಿದೆ. ಕನ್ನಡನಾಡು, ನುಡಿ, ಸಂಸ್ಕೃತಿಗಳನ್ನು ಕುರಿತ ಪುಸ್ತಕಕ್ಕೆ ₹ 5,000 ನಗದು ಮತ್ತು ಇನ್ನೊಂದು ಪುಸ್ತಕಕ್ಕೆ ₹3,000 ಸಮಾಧಾನಕರ ಬಹುಮಾನ ನೀಡಲಾಗುತ್ತದೆ. ಕೃತಿಯ ಎರಡು ಪ್ರತಿಗಳನ್ನು ರಾ.ನಂ. ಚಂದ್ರಶೇಖರ, ಸಂಚಾಲಕ, ಕನ್ನಡ ಗೆಳೆಯರ ಬಳಗ, #1 ‘ಶ್ರೀನಿಲಯ’ ಮಾರಮ್ಮ ದೇವಸ್ಥಾನದ ರಸ್ತೆ, ಕತ್ರಿಗುಪ್ಪೆ, ಬೆಂಗಳೂರು - 560085 ಇಲ್ಲಿ ಕಳುಹಿಸಬೇಕು. ಪ್ರಶಸ್ತಿ ಪ್ರದಾನ ಡಿಸೆಂಬರ್ ಮೊದಲ ವಾರದಲ್ಲಿ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruLiteratureAward