ಸರ್ಕಾರಿ ನೌಕರಿ ಬಯಸೋರಿಗೆ ಗುಡ್ನ್ಯೂಸ್! ಎಸ್ಸಿ, ಎಸ್ಟಿ ಬ್ಯಾಕ್ಲಾಗ್ ಹುದ್ದೆ ಭರ್ತಿಗೆ ಮಹತ್ವದ ನಿರ್ಧಾರ
ರಾಜ್ಯ ಸರ್ಕಾರದ ವಿವಿಧ ಇಲಾಖೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಬ್ಯಾಕ್ ಲಾಗ್ ಹುದ್ದೆಗಳ ನೇಮಕಾತಿಗೆ ಪ್ರತ್ಯೇಕ ಅಧಿಸೂಚನೆ ಪ್ರಕಟಿಸಬೇಕು ಎಂದು ಸಚಿವ ಸಂಪುಟ ಉಪಸಮಿತಿ ನಿರ್ಧರಿಸಿದೆ. ಪ್ರಸ್ತುತ ನಡೆಯುತ್ತಿರುವ ನೇಮಕಾತಿ ಜತೆಗೆ ವಿಲೀನ ಮಾಡದೆ ಪ್ರತ್ಯೇಕವಾಗಿ ಇಡೀ ರಾಜ್ಯಕ್ಕೆ ಒಮ್ಮೆಲೇ ನೋಟಿಫಿಕೇಷನ್ ಹೊರಡಿಸಲು ಸೂಚನೆ ನೀಡಲಾಗಿದೆ. ಈ ಕುರಿತು ಉಪಸಮಿತಿ ಸಭೆಯಲ್ಲಿ ಕೂಡಲೇ ನೇಮಕಾತಿಗೆ ಚಾಲನೆ ನೀಡುವಂತೆ ಸೂಚಿಸಲಾಯಿತು.
ಮೂಲ ವರದಿ: Asianet Suvarna News
ಸಾರ್ವಜನಿಕ ಸುದ್ದಿ ಫೀಡ್ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
SC/STRecruitmentBengaluruGovernment Jobs


