ಬೆಂಗಳೂರಿನಲ್ಲಿ ಡಬಲ್ ಡೆಕ್ಕರ್ ಯೋಜನೆ ಕೈಬಿಟ್ಟ ಬಿಎಂಆರ್ಸಿಎಲ್
ಜೆ.ಪಿ.ನಗರ 4ನೇ ಹಂತದಿಂದ ಕೆಂಪಾಪುರದವರೆಗೆ 32ಕಿ.ಮೀ ಹಾಗೂ ಕಡಬಗೆರೆ-ಹೊಸಹಳ್ಳಿವರೆಗೆ 12.8 ಕಿ.ಮೀ ಒಟ್ಟು 44.65 ಕಿಮೀ ಡಬಲ್ ಡೆಕ್ಕರ್ ಯೋಜನೆಗೆ ಕೇಂದ್ರ ಸರ್ಕಾರ ರೆಡ್ ಸಿಗ್ನಲ್ ನೀಡಿದೆ. ಈ ಹಿನ್ನೆಲೆಯಲ್ಲಿ ಬಿಎಂಆರ್ಸಿಎಲ್, ಇದಕ್ಕೆ ಸಂಬಂಧಿಸಿದ ಮೂರು ಸಿವಿಲ್ ಟೆಂಡರ್ ಗಳನ್ನು ಕ್ಯಾನ್ಸಲ್ ಮಾಡಿದೆ. ಬದಲಿಗೆ, ಬಿಎಂಆರ್ಸಿಎಲ್ ಆರೆಂಜ್ ಲೈನ್ ಮೆಟ್ರೋ ಮಾರ್ಗದಲ್ಲಿ 4 ಫ್ಲೈ ಓವರ್ ಮತ್ತು 1 ಟನಲ್ ಮಾಡಲು ಮುಂದಾಗಿದೆ. ಈ ಯೋಜನೆಗೆ ಸಾರಕ್ಕಿ ಸಿಗ್ನಲ್ ಬಳಿ 1.36 ಕಿ.ಮೀ. ಉದ್ದದ ಫ್ಲೈ ಓವರ್, ಕಾಮಾಕ್ಯ, ಇಟ್ಟಮಡು ಮತ್ತು ಹೊಸಕೆರೆಹಳ್ಳಿ ಜಂಕ್ಷನ್ ಗಳನ್ನು ಸಂಪರ್ಕಿಸುವ 1.56 ಕಿ.ಮೀ. ಉದ್ದದ ಫ್ಲೈ ಓವರ್, ಮಾಗಡಿ ರಸ್ತೆಯ ಸುಮನಹಳ್ಳಿಯಲ್ಲಿ ಸುಮಾರು 600 ಮೀಟರ್ ಉದ್ದದ ಮಿನಿ ಫ್ಲೈ ಓವರ್ ಮತ್ತು ಕಡಬಗೆರೆಯಿಂದ ಹೇರೋಹಳ್ಳಿವರೆಗೆ 4 ಕಿ.ಮೀ. ಉದ್ದದ ಫ್ಲೈ ಓವರ್, ಇದರ ಜೊತೆಗೆ ಗೊರಗುಂಟೆಪಾಳ್ಯದಲ್ಲಿ ಸುಮಾರು 2 ಕಿ.ಮೀ. ಉದ್ದದ ಟನಲ್ ರೋಡ್ ಮಾಡಲಿದೆ.
ಮೂಲ ವರದಿ: TV9 Kannada
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruBMRLMetroInfrastructureInfrastructure Project


