BLR Today
ಸೋಮವಾರ, ನವೆಂಬರ್ 9, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ರಾಜಕೀಯBengaluru1 ಗಂಟೆಗಳ ಹಿಂದೆ

ಛಲವಾದಿ ನಾರಾಯಣ ಸ್ವಾಮಿ ನಿವಾಸಕ್ಕೆ ಚಾಕು ಕಳಿಸಿದ ಪ್ರಕರಣ ಖಂಡಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ

ಛಲವಾದಿ ನಾರಾಯಣ ಸ್ವಾಮಿ ನಿವಾಸಕ್ಕೆ ಚಾಕು ಕಳಿಸಿದ ಪ್ರಕರಣ ಖಂಡಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ
ಚಿತ್ರ: Prajavani

ಛಲವಾದಿ ನಾರಾಯಣ ಸ್ವಾಮಿ ನಿವಾಸಕ್ಕೆ ಚಾಕು ಕಳಿಸಿದ ಪ್ರಕರಣ ಖಂಡಿಸಿ ಬಿಜೆಪಿ ಎಸ್‌ಸಿ ಮೋರ್ಚಾ ಕಾರ್ಯಕರ್ತರು ಭಾನುವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು. ಸರ್ಕಾರ, ಕಾಂಗ್ರೆಸ್ ಪಕ್ಷದ ವಿರುದ್ಧ ಧಿಕ್ಕಾರ ಕೂಗಿದ ಕಾರ್ಯಕರ್ತರು, ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು. ಮಾಜಿ ಶಾಸಕ ವೈ.ಸಂಪಂಗಿ ಮಾತನಾಡಿ, ಬೆಲೆ ಏರಿಕೆಯಿಂದ ತೊಂದರೆ ಗೊಳಗಾಗಿರುವ ರಾಜ್ಯದ ಜನ ಬೀದಿಗಿಳಿದಿದ್ದಾರೆ. ಅವರ ನೆಮ್ಮದಿಯನ್ನು ಸರ್ಕಾರ ಕಸಿದಿದೆ ಎಂದು ಹೇಳಿದರು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruProtestBJPPolitics