BLR Today
ಶುಕ್ರವಾರ, ನವೆಂಬರ್ 27, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru3 ದಿನಗಳ ಹಿಂದೆ

ಬಿಸಿಯೂಟ ನೌಕರರ ಸಂಘವು ನವೆಂಬರ್ 25 ರಿಂದ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಕರೆ ನೀಡಿದೆ

ಬಿಸಿಯೂಟ ನೌಕರರ ಸಂಘವು ನವೆಂಬರ್ 25 ರಿಂದ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಕರೆ ನೀಡಿದೆ
ಚಿತ್ರ: Prajavani

ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘವು ನವೆಂಬರ್ 25 ರಿಂದ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಕರೆ ನೀಡಿದೆ. ಸಂಘದ ತಾಲ್ಲೂಕು ಘಟಕವು ಸೋಮವಾರ ತಿಳಿವಳಿಕೆ ಪತ್ರವನ್ನು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗೆ ಸಲ್ಲಿಸಿದೆ. ಜಿಲ್ಲಾ ಘಟಕದ ಅಧ್ಯಕ್ಷೆ ರೇಣುಕಮ್ಮ ಮಾತನಾಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದವರು ಬಿಸಿಯೂಟದ ನಿರ್ವಹಣೆಯಿಂದ ಶಿಕ್ಷಕರ ಕೆಲಸಕ್ಕೆ ತೊಂದರೆಯಾಗುತ್ತಿದೆ ಎಂಬ ನೆಪವನ್ನು ಮುಂದಿಟ್ಟು ಅಡುಗೆ ನೌಕರರನ್ನು ಕೆಲಸದಿಂದ ವಂಚಿತರನ್ನಾಗಿ ಮಾಡಲು ಹೊರಟಿದ್ದಾರೆ ಎಂದರು. ರಾಜ್ಯದಾದ್ಯಂತ ಕ್ಲಸ್ಟರ್ ಮಟ್ಟದ ಒಂದು ಸೆಂಟರ್‌ ಪ್ರಾರಂಭಿಸಿ, ಸಂಘ-ಸಂಸ್ಥೆ, ಮಹಿಳಾ ಸಂಘ, ಸ್ವ–ಸಹಾಯ ಸಂಘಗಳಿಗೆ ಈ ಅಡುಗೆ ಕೆಲಸದ ಜವಾಬ್ದಾರಿ ನೀಡಿ ಅಡುಗೆ ಮಾಡಿಸಬೇಕೆಂದು ಶಿಕ್ಷಣ ಇಲಾಖೆಗೆ ಮನವಿ ಮಾಡಿದ್ದಾರೆ. ಇದು ಅತ್ಯಂತ ಖಂಡನೀಯ ಮತ್ತು ಬಡ ಮಹಿಳೆಯರ ಉದ್ಯೋಗ ಕಿತ್ತುಕೊಳ್ಳುವ ಅಮಾನವೀಯ ಕೃತ್ಯ ಎಂದೂ ಅವರು ಹೇಳಿದರು. ನಮ್ಮ ಕೆಲಸದ ಉಳುವಿಗಾಗಿ ನವೆಂಬರ್ 25 ರಿಂದ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಅನಿರ್ದಿಷ್ಟಾವಧಿ ಹೋರಾಟಕ್ಕೆ ಕರೆ ನೀಡಲಾಗಿದೆ ಎಂದು ತಿಳಿಸಿದರು. ತಾಲ್ಲೂಕು ಘಟಕದ ಅಧ್ಯಕ್ಷೆ ವಿಶಾಲಾಕ್ಷಿ, ಶರಣಮ್ಮ, ಶರಣಮ್ಮ ಪಾಟೀಲ ಉಪಸ್ಥಿತರಿದ್ದರು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
protestbishyutana workersmid-day mealBengaluru