ಬಿಐಎಸ್ ಬೆಂಗಳೂರಿನಲ್ಲಿ ವಿಶ್ವ ಗುಣಮಟ್ಟ ದಿನಾಚರಣೆ, ಗುಣಮಟ್ಟ ಮತ್ತು ಸುಸ್ಥಿರ ಶಕ್ತಿಯನ್ನು ಒತ್ತಿಹೇಳಿತು
ಬೆಂಗಳೂರಿನ ಭಾರತೀಯ ಪ್ರಮಾಣೀಕರಣ ಸಂಸ್ಥೆ (ಬಿಐಎಸ್) ಪ್ರಾದೇಶಿಕ ಕಚೇರಿಯು ವಿಶ್ವ ಗುಣಮಟ್ಟ ದಿನವನ್ನು ಆಚರಿಸಿತು. 2026ರ ಘೋಷವಾಕ್ಯವಾದ ‘ಉತ್ತಮ ವಿಶ್ವಕ್ಕಾಗಿ ದೂರದೃಷ್ಟಿಯ ಹಂಚಿಕೆ: ಸುಸ್ಥಿರ ಅಭಿವೃದ್ಧಿ ಗುರಿ–7ರತ್ತ ಗಮನ– ಕೈಗೆಟುಕುವ ಸ್ವಚ್ಛ ಇಂಧನ’ ಕುರಿತು ಸಂಪನ್ಮೂಲ ವ್ಯಕ್ತಿಗಳು ವಿಚಾರ ಮಂಡಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ಬಿಐಎಸ್ ಬೆಂಗಳೂರು ಶಾಖೆಯ ಪ್ರಯೋಗಾಲಯದ ಮುಖ್ಯ ನಿರ್ದೇಶಕ ಎಸ್.ಡಿ.ರಾಣೆ ಮಾತನಾಡಿ, ‘ಸುಸ್ಥಿರ ಅಭಿವೃದ್ಧಿಗಾಗಿ ಶಕ್ತಿಯ ಪುನರ್ಬಳಕೆ, ಉತ್ಪನ್ನದಲ್ಲಿ ಗುಣಮಟ್ಟ ಕಾಯ್ದುಕೊಳ್ಳುವುದು ಮುಖ್ಯ’ ಎಂದರು.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BISWorld Quality DayBengaluruSustainable Energy


