ಬಿಗ್ ಬಾಸ್ ವಿನ್ನರ್ ಶಶಿ ಅಪ್ಪನಾಗುವ ಸಂಭ್ರಮದ ವಿಡಿಯೋ ಶೇರ್ ಮಾಡಿಕೊಂಡ ನಟ
ಕನ್ನಡ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 6 ವಿನ್ನರ್, ಮಾಡರ್ನ್ ರೈತ ಎಂದೇ ಫೇಮಸ್ ಆಗಿರೋ ಶಶಿ ಕುಮಾರ್ ಮತ್ತು ಸ್ವಾತಿ 2022ರ ಆಗಸ್ಟ್ 7ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಅವರು ಅಪ್ಪ-ಅಮ್ಮನಾಗುವ ಸಂಭ್ರಮದಲ್ಲಿದ್ದು, ಇದರ ವಿಡಿಯೋ ಅನ್ನು ಶಶಿ ಅವರು ಶೇರ್ ಮಾಡಿಕೊಂಡಿದ್ದಾರೆ. 2018-19ರಲ್ಲಿ ನಡೆದ 'ಬಿಗ್ ಬಾಸ್ ಕನ್ನಡ ಸೀಸನ್ 6' ರಲ್ಲಿ ಸಾಮಾನ್ಯ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟು ಟ್ರೋಫಿ ಗೆದ್ದುಕೊಂಡವರು ಶಶಿ ಕುಮಾರ್. ಅವರಿಗೆ 50 ಲಕ್ಷ ರೂ. ಬಹುಮಾನ ಸಿಕ್ಕಿತ್ತು. ಎಲ್ಲಾ ಕಳೆದು 36 ಲಕ್ಷ ರೂ. ಕೈಸೇರಿತ್ತು.
ಮೂಲ ವರದಿ: Asianet Suvarna News
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
Bigg BossShashi KumarBengaluruCelebrityFamily

