ಬಿಗ್ ಬಾಸ್ ಸ್ಟಾರ್ ಗಿಲ್ಲಿ ಕನ್ಫ್ಯೂಸ್ ಆಗಿದ್ದೇಕೆ? ಕಾಂಗ್ರೆಸ್ ನಾಯಕಿ ಕುಸುಮಾ ಹಳೆಯ ನೆನಪುಗಳನ್ನು ನೆನಪಿಸಿಕೊಂಡರು
ಆಸರೆ ರಿಯಾಲ್ಟಿ ಸಂಸ್ಥೆಯ ನೂತನ 'ಕೆ.ಪಿ. ಗ್ರೀನ್ ಲೇಕ್ ವ್ಯೂ' ರೆಸಿಡೆನ್ಶಿಯಲ್ ಪ್ಲಾಟ್ ಉದ್ಘಾಟನಾ ಸಮಾರಂಭ ಇತ್ತೀಚೆಗೆ ನಡೆಯಿತು. ಈ ಕಾರ್ಯಕ್ರಮಕ್ಕೆ ಬಿಗ್ ಬಾಸ್ ಖ್ಯಾತಿಯ ಗಿಲ್ಲಿ, ರಜತ್ ಹಾಗೂ ವಿನಯ್ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕಿ ಕುಸುಮಾ ಹನುಮಂತರಾಯಪ್ಪ ಕೂಡ ಭಾಗಿಯಾಗಿದ್ದರು. ವೇದಿಕೆ ಮೇಲೆ ಕುಸುಮಾ ಬಗ್ಗೆ ಮಾತು ಆರಂಭಿಸಿ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ನಾನು ಕುಸುಮಾ ಅಕ್ಕನ ಬಗ್ಗೆ ಹೇಳಲೇಬೇಕು. ನಾನು ಲಗ್ಗೆರಿಯಲ್ಲಿ ನಾಲ್ಕರಿಂದ ಐದು ವರ್ಷಗಳ ಕಾಲ ಇದ್ದೆ. ಈ ಮೊದಲು ನಾನು ಅವರನ್ನು ನೋಡಿದ್ದು ರಸ್ತೆ ಬದಿಯಲ್ಲಿ ಹಾಕಿದ್ದ ಬ್ಯಾನರ್ ಗಳ ಮೂಲಕ. ಕಾರ್ಯಕ್ರಮಗಳ ಸಂಬಂಧ ರಸ್ತೆ ಬದಿಯಲ್ಲಿ ಅವರ ಬ್ಯಾನರ್ ಗಳನ್ನು ನೋಡುತ್ತಿದ್ದೆ. ಮುಂದುವರಿದು ತಮಾಷೆಯಾಗಿ ಮಾತನಾಡಿದ ಗಿಲ್ಲಿ.. ಆ ಬ್ಯಾನರ್ ಗಳನ್ನು ನೋಡಿದಾಗ ಇವರು ಯಾವುದೋ ಹೀರೋಯಿನ್ ಆಗಿರಬೇಕು. ಯಾರೋ ಸಿನಿಮಾ ಅಥವಾ ಸೀರಿಯಲ್ ಕಲಾವಿದೆ ಇರಬೇಕು. ಅದಕ್ಕೇ ಹೆಚ್ಚಾಗಿ ಗೆಸ್ಟ್ ಆಗಿ ಬರ್ತಿದ್ದಾರೆ ಅಂದುಕೊಂಡಿದ್ದೆ. ತುಂಬಾ ದಿನಗಳವರೆಗೆ ನಾನು ನಿಮ್ಮನ್ನು ಹಾಗೆಯೇ ಅಂದುಕೊಂಡಿದ್ದೆ. ಆಮೇಲೆ ಗೊತ್ತಾಯ್ತು ಇವರು ರಾಜಕಾರಣಿ ಎಂದು ಎಂದಿದ್ದಾರೆ. ಆಗ ಇಡೀ ವೇದಿಕೆ ಜೋರಾಗಿ ನಕ್ಕಿದೆ. ಇದೇ ವೇಳೆ ಗಿಲ್ಲಿ ಬಿಗ್ ಬಾಸ್ ಗೆ ಹೋದಾಗ ಕುಸುಮಾ ಅವರು ಮಾಡಿ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದರು. ನಾನು ಬಿಗ್ ಬಾಸ್ ಗೆ ಹೋದ ಮೇಲೆ, ನಮ್ಮ ಏರಿಯಾದಲ್ಲಿದ್ದ ಹುಡುಗ, ಲಗ್ಗೆರೆಯಲ್ಲಿದ್ದವನು ಎಂದು ಕುಸುಮಾ ಅಕ್ಕ ತುಂಬಾ ಸಪೋರ್ಟ್ ಮಾಡಿದರು. ಬಿಗ್ ಬಾಸ್ ನಿಂದ ಹೊರಗೆ ಬಂದ್ಮೇಲೆ ಈ ವಿಚಾರ ಗೊತ್ತಾಯ್ತು. ಅವರ ಈ ಸಹಕಾರವನ್ನು ನಾನು ಯಾವತ್ತೂ ಮರೆಯೋಕೆ ಆಗೋದಿಲ್ಲ. ಅವತ್ತೇ ನಾನು ಅವರನ್ನು ಭೇಟಿ ಆಗಬೇಕು ಅಂದುಕೊಂಡಿದ್ದೆ. ಆದರೆ ಆಗಿರಲಿಲ್ಲ. ಇವತ್ತು ಆಸರೆ ರಿಯಾಲಿಟಿ ಕಾರ್ಯಕ್ರಮದ ಮೂಲಕ ಆ ಕಾಲ ಕೂಡಿ ಬಂದಿದೆ ಎಂದು ಖುಷಿ ವ್ಯಕ್ತಪಡಿಸಿದರು.


