ಇಂದಿರಾ ನಗರ ಕ್ಲಬ್‌ನಲ್ಲಿ 24ಕ್ಕೆ ‘ಭೂಮಿಕಾ ಕ್ಲಬ್’ ಕಾರ್ಯಕ್ರಮ
‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಮಹಿಳೆಯರಿಗಾಗಿ ಸ್ಥಾಪಿಸಿರುವ ‘ಭೂಮಿಕಾ ಕ್ಲಬ್’ ವೇದಿಕೆಯು ಅ.24ರಂದು ಮಧ್ಯಾಹ್ನ 3ಕ್ಕೆ ಇಂದಿರಾ ನಗರ ಕ್ಲಬ್‌ನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿದೆ. ‘ಗೋಲ್ಡ್ ವಿನ್ನರ್’, ‘ಮಣಿಪಾಲ್ ಹಾಸ್ಪಿಟಲ್ಸ್’ ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮವು ದೀಪಾವಳಿಯ ವಿಶೇಷ ಆವೃತ್ತಿಯಾಗಿದೆ. ವಾಸು ದೀಕ್ಷಿತ್ ಅವರಿಂದ ವಿಶೇಷ ಲೈವ್ ಸಂಗೀತ ಕಾರ್ಯಕ್ರಮ, ಮಣಿಪಾಲ್ ಆಸ್ಪತ್ರೆ ವತಿಯಿಂದ ಆರೋಗ್ಯ ಮತ್ತು ಉತ್ತಮ ಜೀವನ ಶೈಲಿ ಕುರಿತು ಮಾಹಿತಿ ಕಾರ್ಯಾಗಾರ ಇರಲಿದೆ. ಗೋಲ್ಡ್ ವಿನ್ನರ್ ಅಡುಗೆ ಸ್ಪರ್ಧೆ ನಡೆಯಲಿದೆ.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruPrajavaniDeccan HeraldIndira Nagar ClubDiwaliWomen's Event


