BLR Today
ಗುರುವಾರ, ನವೆಂಬರ್ 19, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ವ್ಯಾಪಾರBengaluru1 ದಿನಗಳ ಹಿಂದೆ

ಬಾಲು ಫೋರ್ಜ್ ಇಂಡಸ್ಟ್ರೀಸ್ ಮೊದಲ ಆರು ತಿಂಗಳಲ್ಲಿ ದಾಖಲೆಯ ವರಮಾನ

ಬಾಲು ಫೋರ್ಜ್ ಇಂಡಸ್ಟ್ರೀಸ್ ಮೊದಲ ಆರು ತಿಂಗಳಲ್ಲಿ ದಾಖಲೆಯ ವರಮಾನ
ಚಿತ್ರ: Prajavani

ಪ್ರಿಸಿಷನ್ ಎಂಜಿನಿಯರಿಂಗ್ ಮತ್ತು ಉತ್ಪಾದನಾ ವಲಯದ ಪ್ರಮುಖ ಕಂಪನಿಗಳ ಪೈಕಿ ಒಂದಾಗಿರುವ ಬಾಲು ಫೋರ್ಜ್ ಇಂಡಸ್ಟ್ರೀಸ್ ಲಿಮಿಟೆಡ್ ಪ್ರಸಕ್ತ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ ದಾಖಲೆಯ ₹625.1 ಕೋಟಿ ವರಮಾನ ಗಳಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಗಳಿಸಿದ್ದ ₹523.7 ಕೋಟಿ ಆದಾಯಕ್ಕೆ ಹೋಲಿಸಿದರೆ ಈ ಬಾರಿ ಶೇ.17.3ರಷ್ಟು ಬೆಳವಣಿಗೆ ಸಾಧಿಸಿದೆ ಎಂದು ಪ್ರಕಟಣೆ ತಿಳಿಸಿದೆ. ಕಂಪನಿಯ ಬಡ್ಡಿ, ಸಾಲ ತೀರುವಳಿ, ಸವಕಳಿ ನಂತರದ ವರಮಾನ (ಇಬಿಐಟಿಎ) ಶೇ 15.1ರಷ್ಟು ಹೆಚ್ಚಳವಾಗಿ ₹178.5 ಕೋಟಿಗೆ ತಲುಪಿದೆ. ಕಂಪನಿಯ ತೆರಿಗೆ ನಂತರದ ಲಾಭ ಶೇ.16.9ರಷ್ಟು ಏರಿಕೆಯಾಗಿ ₹142.7 ಕೋಟಿಗೆ ತಲುಪಿದೆ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
businessBengaluru