ಬಜಾಜ್ ಫೈನಾನ್ಸ್ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರ ಹೆಚ್ಚಿಸಿದೆ
ಬಜಾಜ್ ಫೈನಾನ್ಸ್ ಲಿಮಿಟೆಡ್ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಿದೆ. ಪರಿಷ್ಕೃತ ದರ ಬುಧವಾರದಿಂದಲೇ ಜಾರಿಗೆ ಬರುತ್ತದೆ ಎಂದು ತಿಳಿಸಿದೆ. 31 ತಿಂಗಳಿನಿಂದ 60 ತಿಂಗಳವರೆಗಿನ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರ ಸಾಮಾನ್ಯ ಠೇವಣಿದಾರರಿಗೆ ಶೇ 0.35ರಷ್ಟು ಹಾಗೂ ಹಿರಿಯ ನಾಗರಿಕರಿಗೆ ಶೇ 0.40ಯಷ್ಟು ಹೆಚ್ಚಳ ಆಗಿದೆ. ಹೊಸದಾಗಿ ಠೇವಣಿ ಇರಿಸುವವರು 31ರಿಂದ 60 ತಿಂಗಳ ಅವಧಿವರೆಗಿನ ಠೇವಣಿಗೆ ವಾರ್ಷಿಕ ಶೇ 7.75ರವರೆಗೆ ಬಡ್ಡಿ ಪಡೆಯಬಹುದು. ಈವರೆಗೆ ಅದು ಶೇ 7.40ರಷ್ಟಿತ್ತು.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
financebajaj financeinterest ratesfixed deposits


