BLR Today
ಶುಕ್ರವಾರ, ಸೆಪ್ಟೆಂಬರ್ 25, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru2 ಗಂಟೆಗಳ ಹಿಂದೆ

ಹಾಸ್ಟೆಲ್‌ ಕಾಮಗಾರಿ ಶೀಘ್ರ ಮುಗಿಸಿ

ಹಾಸ್ಟೆಲ್‌ ಕಾಮಗಾರಿ ಶೀಘ್ರ ಮುಗಿಸಿ
ಚಿತ್ರ: Prajavani

ಹಾಸ್ಟೆಲ್‌ಗಳ ನವೀಕರಣಕಾಮಗಾರಿಯನ್ನು ಡಿಸೆಂಬರ್ ಅಂತ್ಯ ದೊಳಗೆ ಪೂರ್ಣಗೊಳಿಸಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್‌ ತಂಗಡಗಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು. ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಗುರುವಾರ ಸಭೆನಡೆಸಿದ ಅವರು, ಹಾಸ್ಟೆಲ್‌ಗಳ ನಿರ್ಮಾಣ, ನವೀಕರಣ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ ಗಳ ಪ್ರಗತಿ ಪರಿಶೀಲಿಸಿದರು. 'ಕಾಮಗಾರಿ ವಿಳಂಬಕ್ಕೆ ಗುತ್ತಿಗೆ ದಾರರು ಕಾರಣ' ಎಂದು ಅಧಿಕಾರಿಗಳು ಹೇಳಿದಾಗ ಅಸಮಾಧಾನಗೊಂಡ ಸಚಿವರು, 'ಗುತ್ತಿಗೆದಾರರ ಕೆಲಸದ ಮೇಲ್ವಿಚಾರಣೆ ಮಾಡು ವುದು ಅಧಿಕಾರಿಗಳ ಜವಾಬ್ದಾರಿ' ಎಂದರು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruBBMPBBMP-relatedKarnataka