BLR Today
ಶುಕ್ರವಾರ, ಅಕ್ಟೋಬರ್ 30, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru3 ಗಂಟೆಗಳ ಹಿಂದೆ

ಎಕ್ಸಿಸ್ ಬ್ಯಾಂಕ್ ಮತ್ತು ಐಐಎಂಬಿ ಜಿಗಣಿ ಕ್ಯಾಂಪಸ್‌ನಲ್ಲಿ ಅರ್ಥಶಾಸ್ತ್ರ ಕೇಂದ್ರ ಸ್ಥಾಪನೆ

ಎಕ್ಸಿಸ್ ಬ್ಯಾಂಕ್ ಮತ್ತು ಐಐಎಂಬಿ ಜಿಗಣಿ ಕ್ಯಾಂಪಸ್‌ನಲ್ಲಿ ಅರ್ಥಶಾಸ್ತ್ರ ಕೇಂದ್ರ ಸ್ಥಾಪನೆ
ಚಿತ್ರ: Prajavani

ಎಕ್ಸಿಸ್ ಬ್ಯಾಂಕ್ ಮತ್ತು ಐಐಎಂಬಿ ಜಿಗಣಿಯಲ್ಲಿರುವ ಐಐಎಂಬಿಯ ಪದವಿ ಕೋರ್ಸ್‌ಗಳ ಕ್ಯಾಂಪಸ್‌ನಲ್ಲಿ 'ಎಕ್ಸಿಸ್ ಬ್ಯಾಂಕ್ ಸೆಂಟರ್ ಆಫ್ ಎಕನಾಮಿಕ್ಸ್' ಸ್ಥಾಪಿಸಲು ಒಪ್ಪಂದ ಮಾಡಿಕೊಂಡಿವೆ. ಮುಂಬೈನ ವರ್ಲಿಯಲ್ಲಿರುವ ಎಕ್ಸಿಸ್ ಹೌಸ್‌ನಲ್ಲಿ ಐಐಎಂಬಿ ಆಡಳಿತ ಮಂಡಳಿ ಅಧ್ಯಕ್ಷ ಡಾ.ದೇವಿ ಪ್ರಸಾದ್ ಶೆಟ್ಟಿ ಹಾಗೂ ಎಕ್ಸಿಸ್ ಬ್ಯಾಂಕ್‌ನ ಸಿಇಒ ಅಮಿತಾಬ್‌ ಚೌಧರಿ ಸಹಿ ಹಾಕಿದರು. ಐಐಎಂಬಿ ಉಸ್ತುವಾರಿ ನಿರ್ದೇಶಕ ಪ್ರೊ.ಯು.ದಿನೇಶ್ ಕುಮಾರ್, ಎಕ್ಸಿಸ್ ಬ್ಯಾಂಕಿನ ಸಿಎಸ್‌ಆರ್ ಗ್ರೂಪ್ ಮುಖ್ಯಸ್ಥ ವಿಜಯ್ ಮುಳಬಾಗಿಲು ಈ ವೇಳೆ ಹಾಜರಿದ್ದರು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
Axis BankIIMBJiganiBengaluru