BLR Today
ಶುಕ್ರವಾರ, ನವೆಂಬರ್ 6, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru4 ಗಂಟೆಗಳ ಹಿಂದೆ

ಏಳನೇ ರಾಜ್ಯ ರ‍್ಯಾಂಕಿಂಗ್‌ ಟೇಬಲ್ ಟೆನಿಸ್ ಟೂರ್ನಿ: ಅಥರ್ವ್, ರಾಶಿಗೆ ಪ್ರಶಸ್ತಿ

ಏಳನೇ ರಾಜ್ಯ ರ‍್ಯಾಂಕಿಂಗ್‌ ಟೇಬಲ್ ಟೆನಿಸ್ ಟೂರ್ನಿ: ಅಥರ್ವ್, ರಾಶಿಗೆ ಪ್ರಶಸ್ತಿ
ಚಿತ್ರ: Prajavani

ಬೆಂಗಳೂರಿನ ಕೆಜಿಎಸ್ ಕ್ಲಬ್, ಕಬ್ಬನ್ ಪಾರ್ಕ್‌ನಲ್ಲಿ ನಡೆದ ಏಳನೇ ರಾಜ್ಯ ರ‍್ಯಾಂಕಿಂಗ್‌ ಟೇಬಲ್ ಟೆನಿಸ್ ಟೂರ್ನಿಯ 17 ವರ್ಷದೊಳಗಿನವರ ವಿಭಾಗದಲ್ಲಿ ಅಥರ್ವ ನವರಂಗೆ ಮತ್ತು ರಾಶಿ ವಿ ರಾವ್ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ಪ್ರಶಸ್ತಿ ಜಯಿಸಿದರು. ಟೂರ್ನಿಯ ಫೈನಲ್‌ನಲ್ಲಿ ಅಥರ್ವ 9-11, 15-13, 11-3, 11-6 ರಿಂದ ರೆಯಾಂಶ್ ಜಲಾನ್ ವಿರುದ್ಧ ಗೆದ್ದರು. ಬಾಲಕಿಯರ ಫೈನಲ್‌ನಲ್ಲಿ ರಾಶಿ 11–6, 11–4, 11–8ರಿಂದ ಐರಿನ್ ಆನಾ ಸುಭಾಶ್ ವಿರುದ್ಧ ಗೆದ್ದರು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruSportsTable Tennis