BLR Today
ಶನಿವಾರ, ಅಕ್ಟೋಬರ್ 24, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಅಪರಾಧBengaluru1 ಗಂಟೆಗಳ ಹಿಂದೆ

ಸ್ಟಿಂಗ್ ಕಾರ್ಯಾಚರಣೆ: ಮೊದಲ ಬಂಧನ, ಉಳಿದ ಆರೋಪಿಗಳಿಗಾಗಿ ಶೋಧ

ಸ್ಟಿಂಗ್ ಕಾರ್ಯಾಚರಣೆ: ಮೊದಲ ಬಂಧನ, ಉಳಿದ ಆರೋಪಿಗಳಿಗಾಗಿ ಶೋಧ
ಚಿತ್ರ: Prajavani

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದ ದೂರು ಆಧರಿಸಿ, ಸ್ಟಿಂಗ್ ಕಾರ್ಯಾಚರಣೆ ನಡೆಸಿದ್ದವರ ಪತ್ತೆಗೆ ಮುಂದಾಗಿರುವ ಸಿಸಿಬಿ ಮತ್ತು ನಗರ ಕೇಂದ್ರ ಸೈಬರ್ ಅಪರಾಧ ವಿಭಾಗದ ಪೊಲೀಸರು ದೆಹಲಿಯಲ್ಲಿ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ರಿತೇಶ್ ಪಾಂಡೆ ಬಂಧಿತ. ಆರೋಪಿಯನ್ನು ವಶಕ್ಕೆ ಪಡೆದು ರಹಸ್ಯ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ರಿತೇಶ್ ಪಾಂಡೆ ಸ್ಟಿಂಗ್ ಕಾರ್ಯಾಚರಣೆಗೋಸ್ಕರ ಮೊಬೈಲ್ ಖರೀಸಿದ್ದ. ಕೃತ್ಯ ನಡೆಸಿದ್ದ ತಂಡಕ್ಕೆ ನೆರವು ನೀಡಿದ್ದ ಮೂಲಗಳು ತಿಳಿಸಿವೆ. ಉಳಿದ ಆರೋಪಿಗಳ ಬಂಧನಕ್ಕೆ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದೇ ಪ್ರಕರಣದಲ್ಲಿ ಬಂಧನದ ಭೀತಿ ಎದುರಿಸುತ್ತಿದ್ದ ಪವರ್ ಟಿವಿ ಸುದ್ದಿ ವಾಹಿನಿಯ ಮುಖ್ಯಸ್ಥ ರಾಕೇಶ್ ಶೆಟ್ಟಿ ಅವರು ಸಿಸಿಎಚ್ ನ್ಯಾಯಾಲಯದಿಂದ ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruCrimeSiddaramaiahCCBCyber Crime