BLR Today
ಶುಕ್ರವಾರ, ನವೆಂಬರ್ 27, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಹಬ್ಬದ ಸುದ್ದಿBengaluru3 ದಿನಗಳ ಹಿಂದೆ

ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ, ಚಂಡಿಕಾ ಹೋಮ ಮತ್ತು ಪಲ್ಲಕ್ಕಿ ಉತ್ಸವ ಆಯೋಜನೆ

ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ, ಚಂಡಿಕಾ ಹೋಮ ಮತ್ತು ಪಲ್ಲಕ್ಕಿ ಉತ್ಸವ ಆಯೋಜನೆ
ಚಿತ್ರ: Prajavani

ನಾಗದೇವನಹಳ್ಳಿಯ ಜ್ಞಾನಭಾರತಿ ಬಡಾವಣೆಯ 4ನೇ ಹಂತದಲ್ಲಿರುವ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಡಿಸೆಂಬರ್ 24ರಂದು ಲಕ್ಷ ದೀಪೋತ್ಸವ, ಚಂಡಿಕಾ ಹೋಮ, ಸತ್ಯನಾರಾಯಣ ಪೂಜೆ, ಪಲ್ಲಕ್ಕಿ ಉತ್ಸವ ಮತ್ತು ಅನ್ನಸಂತರ್ಪಣೆ ನಡೆಯಲಿದೆ ಎಂದು ಅನ್ನಪೂರ್ಣೇಶ್ವರಿ ದೇವಸ್ಥಾನ ಚಾರಿಟೆಬಲ್‌ ಟ್ರಸ್ಟ್‌ ವ್ಯವಸ್ಥಾಪಕ ಧರ್ಮದರ್ಶಿ ಬಿ.ಕೃಷ್ಣಮೂರ್ತಿ ತಿಳಿಸಿದರು. ಬೆಳಿಗ್ಗೆ 9 ಗಂಟೆಗೆ ಸತ್ಯನಾರಾಯಣ ಪೂಜೆ, 9.30ರಿಂದ 12.30ರವರೆಗೆ ಚಂಡಿಕಾ ಹೋಮ, ಮಧ್ಯಾಹ್ನ 1 ಗಂಟೆಗೆ ಅನ್ನ ಸಂತರ್ಪಣೆ, ಸಂಜೆ 6.30ಕ್ಕೆ ದೇವಸ್ಥಾನದ ಮುಖ್ಯದ್ವಾರದ 80 ಅಡಿ ರಸ್ತೆಯಿಂದ ದೀಪ ಹಚ್ಚಲಾಗುವುದು. 7.30ಕ್ಕೆ ಪಲ್ಲಕ್ಕಿ ಉತ್ಸವ ನಡೆಯಲಿದೆ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruReligionFestivalAnnapurneshwari Temple