BLR Today
ಬುಧವಾರ, ಸೆಪ್ಟೆಂಬರ್ 23, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಹಬ್ಬದ ಸುದ್ದಿBengaluru1 ಗಂಟೆಗಳ ಹಿಂದೆ

‘ಅಲೆ’ ಸಾಹಿತ್ಯ ಉತ್ಸವ ನಾಳೆಯಿಂದ

‘ಅಲೆ’ ಸಾಹಿತ್ಯ ಉತ್ಸವ ನಾಳೆಯಿಂದ
ಚಿತ್ರ: Prajavani

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್‌ನ ಅಂಗಸಂಸ್ಥೆಯಾದ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಲಿಬರಲ್ ಆರ್ಟ್ಸ್, ಹ್ಯುಮಾನಿಟೀಸ್ ಆ್ಯಂಡ್ ಸೋಷಿಯಲ್ ಸೈನ್ಸಸ್‌ನ ಭಾಷಾ ಮತ್ತು ಸಾಹಿತ್ಯ ಅಧ್ಯಯನ ವಿಭಾಗವು ಸೆ.24 ಮತ್ತು 25ರಂದು ‘ಅಲೆ’ ಸಾಹಿತ್ಯ ಉತ್ಸವವನ್ನು ಹಮ್ಮಿಕೊಂಡಿದೆ. 'ವೇವ್ಸ್ ಆಫ್ ಹೋಪ್' ಎಂಬ ಆಶಯದೊಂದಿಗೆ ಆಯೋಜಿಸಿರುವ ಈ ಉತ್ಸವವು ಅಕಾಡೆಮಿಯ ಕ್ಯಾಂಪಸ್‌ನ ಎಬಿ–1 ಸಭಾಂಗಣದಲ್ಲಿ ಬೆಳಿಗ್ಗೆ 9ಕ್ಕೆ ಆರಂಭವಾಗಲಿದೆ. ಈ ಉತ್ಸವದಲ್ಲಿ ಬೆನ್ಯಾಮಿನ್ ಅವರು ‘ಬಿಯಾಂಡ್ ದಿ ಪೇಜ್: ರೀಡಿಂಗ್ ಆ್ಯಸ್ ಎ ಬೀಕನ್ ಆಫ್ ಹೋಪ್’ ಕುರಿತು ಮಾತನಾಡಲಿದ್ದಾರೆ. ಸ್ತ್ರೀವಾದಿ ಚಿಂತಕಿ ಊರ್ವಶಿ ಬುಟಾಲಿಯಾ ಅವರು ‘ಪ್ರಕಾಶನ, ಬರವಣಿಗೆ ಮತ್ತು ಸಕ್ರಿಯತೆ: ಸ್ತ್ರೀವಾದಿ ಜೀವನದ ಅವಲೋಕನ’ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruLiteratureFestival