ಎಐಟಿಯುಸಿ ರಾಷ್ಟ್ರೀಯ ಸಮ್ಮೇಳನ ನವೆಂಬರ್ 22 ರಿಂದ 26 ರವರೆಗೆ ಬೆಂಗಳೂರಿನಲ್ಲಿ
ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ನ (ಎಐಟಿಯುಸಿ) 43ನೇ ರಾಷ್ಟ್ರೀಯ ಸಮ್ಮೇಳನವು ನವೆಂಬರ್ 22 ರಿಂದ 26 ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಪ್ರಭುದೇವ ಯಳಸಂಗಿ ತಿಳಿಸಿದರು. ಈ ಸಮಾವೇಶದಲ್ಲಿ ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆಯ 50 ಸಾವಿರ ಮಂದಿ ಪಾಲ್ಗೊಳ್ಳಲಿದ್ದಾರೆ. ನವೆಂಬರ್ 20 ಮತ್ತು 21 ರಂದು ವಿಶ್ವಕಾರ್ಮಿಕ ಸಂಘಟನೆಗಳ ಒಕ್ಕೂಟದ ಏಷ್ಯಾ–ಪೆಸಿಫಿಕ್ ಸಮ್ಮೇಳನವೂ ಬೆಂಗಳೂರಿನಲ್ಲಿ ನಡೆಯಲಿದೆ. ಫೋರ್ಚುಗಲ್, ನೇಪಾಳ, ಬಾಂಗ್ಲಾದೇಶ, ಪ್ಯಾಲಿಸ್ಟೇನ್, ಇರಾನ್, ಬಹ್ರೇನ್ ಸೇರಿದಂತೆ ವಿವಿಧ 15 ದೇಶಗಳ 100 ಅಂತರರಾಷ್ಟ್ರೀಯ ಪ್ರತಿನಿಧಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
AITUCNational ConferenceBengaluruLabour Issues


