BLR Today
ಶನಿವಾರ, ಸೆಪ್ಟೆಂಬರ್ 26, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru1 ಗಂಟೆಗಳ ಹಿಂದೆ

AI ಕ್ಯಾಮೆರಾ ಯಡವಟ್ಟು – ಗಿಟಾರ್‌ಗೆ ಹೆಲ್ಮೆಟ್ ಹಾಕಿಲ್ಲ ಅಂತ ದಂಡ

AI ಕ್ಯಾಮೆರಾ ಯಡವಟ್ಟು – ಗಿಟಾರ್‌ಗೆ ಹೆಲ್ಮೆಟ್ ಹಾಕಿಲ್ಲ ಅಂತ ದಂಡ
ಚಿತ್ರ: Public TV

ಟ್ರಾಫಿಕ್ ರೂಲ್ಸ್ ಉಲ್ಲಂಘನೆ ತಡೆಗೆ ಅಳವಡಿಸಲಾಗಿರುವ ಎಐ ಕ್ಯಾಮೆರಾ ಯಡವಟ್ಟೊಂದನ್ನು ಮಾಡಿದೆ. ಸ್ಕೂಟಿಯಲ್ಲಿ ಕೊಂಡೊಯ್ಯಲಾಗುತ್ತಿದ್ದ ಗಿಟಾರ್ ಹೆಲ್ಮೆಟ್ ಧರಿಸಿಲ್ಲ ಎಂದು ದಂಡ ಹಾಕಿದೆ. ಸೌವಿಕ್ ದತ್ತ ಎಂಬುವವರು ಸ್ಕೂಟರ್‌ನಲ್ಲಿ ಹೆಬ್ಬಾಳದಿಂದ ಟಿನ್ ಫ್ಯಾಕ್ಟರಿಗೆ ಕಡೆಗೆ ಹೊರಟಿದ್ದರು. ಈ ವೇಳೆ ಗಿಟಾರ್ ಅನ್ನು ಬೆನ್ನಿಗೆ ಹಾಕಿಕೊಂಡಿದ್ದರು. ಇದನ್ನು ಗಮನಿಸಿದ ಎಐ ಕ್ಯಾಮೆರಾ, ಹಿಂಬದಿಯಲ್ಲಿದ್ದ ಗಿಟಾರ್ ಅನ್ನು ಮನುಷ್ಯ ಎಂದುಕೊಂಡು ಹೆಲ್ಮೆಟ್ ಹಾಕಿಲ್ಲ ಎಂದು ದಂಡ ವಿಧಿಸಿದೆ. ಪೊಲೀಸರು ಪ್ರತಿಕ್ರಿಯಿಸಿ ತಮ್ಮನ್ನು ಸಂಪರ್ಕಿಸುವಂತೆ ಸೂಚಿಸಿದ್ದಾರೆ.

ಮೂಲ ವರದಿ: Public TV ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruAI CameraTraffic RulesHebbal