BLR Today
ಮಂಗಳವಾರ, ಅಕ್ಟೋಬರ್ 13, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru4 ಗಂಟೆಗಳ ಹಿಂದೆ

ಕಾರ್ಮಿಕರಿಗೆ ನೆರವಾಗುವ ಆ್ಯಪ್

ಕಾರ್ಮಿಕರಿಗೆ ನೆರವಾಗುವ ಆ್ಯಪ್
ಚಿತ್ರ: Prajavani

ನಿರ್ಮಾಣ ಕ್ಷೇತ್ರದ ಕಾರ್ಮಿಕರು ಮತ್ತು ಗುತ್ತಿಗೆದಾರರ ಅನುಕೂಲಕ್ಕಾಗಿ ರೂಪಿಸಿರುವ ಎಐ ಆಧಾರಿತ ಕಾರ್ಮಿಕರ ನಿರ್ವಹಣಾ ಆ್ಯಪ್ ‘ಕ್ಯಾಪ್ಟೆಕ್ ಇ-ಫೋರ್ಸ್’ ಅನ್ನು ಕ್ಯಾಪ್ಟೆಕ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮರುಬಿಡುಗಡೆ ಮಾಡಿದೆ. ಈ ಆ್ಯಪ್ ಕಾರ್ಮಿಕರ ನಿಯೋಜನೆ, ಕಾಮಗಾರಿ ನಿರ್ವಹಣೆ, ದೈನಂದಿನ ಪ್ರಗತಿಯ ವರದಿ, ಮುಂಗಡ ಹಣ ಪಾವತಿ ಮತ್ತು ಬಿಲ್ಲಿಂಗ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆಗೆ ನೆರವಾಗುವ ಉದ್ದೇಶ ಹೊಂದಿದೆ ಎಂದು ಕ್ಯಾಪ್ಟೆಕ್ ಟೆಕ್ನಾಲಜೀಸ್‌ನ ಸಂಸ್ಥಾಪಕ ಮತ್ತು ಸಿಇಒ ಅಶುತೋಷ್ ಕಾತ್ಯಾಲ್ ತಿಳಿಸಿದ್ದಾರೆ. 'ಗುತ್ತಿಗೆದಾರರು ಬಿಲ್ ಪಾವತಿಯ ಸ್ಥಿತಿಯನ್ನು ತಿಳಿಯಲು ಪದೇ ಪದೇ ಕರೆ ಮಾಡುವ ಅಗತ್ಯವಿಲ್ಲ. ಇದರ ಮೂಲಕವೇ ತಿಳಿದುಕೊಳ್ಳ ಬಹುದು' ಎಂದೂ ಅವರು ಹೇಳಿದ್ದಾರೆ.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruTechnologyLabor Market