BLR Today
ಭಾನುವಾರ, ಸೆಪ್ಟೆಂಬರ್ 27, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ಶಿಕ್ಷಣBengaluru3 ಗಂಟೆಗಳ ಹಿಂದೆ

ನೂತನ ಬೋಧನಾ ವಿಧಾನ ಅಳವಡಿಸಿಕೊಳ್ಳಿ

ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯವು ಏರ್ಪಡಿಸಿದ್ದ ವಿಶ್ವವಲಯದ ಸಂಯೋಜಿತ ಕಾಲೇಜುಗಳ ಪ್ರಾಂಶುಪಾಲರ ಸಮ್ಮೇಳನ ಮತ್ತು ನಿವೃತ್ತ ಪ್ರಾಂಶುಪಾಲರ ಅಭಿನಂದನಾ ಸಮಾರಂಭದಲ್ಲಿ ವಿಟಿಯು ವಿಶ್ರಾಂತ ಕುಲಪತಿ ಡಾ.ಕರಿಸಿದ್ಧಪ್ಪ ಅವರು ಮಾತನಾಡಿದರು. ಮಾಹಿತಿ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳ ಕಲಿಕೆಯ ವ್ಯಾಪ್ತಿಯು ತರಗತಿಯ ಆಚೆಗೆ ವಿಸ್ತರಿಸಲ್ಪಟ್ಟಿದೆ. ಈ ಪರಿಸ್ಥಿತಿಗೆ ತಕ್ಕಂತೆ ಅಧ್ಯಾಪಕರು ನೂತನ ಬೋಧನಾ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. 'ಸಾಮಾಜಿಕ ಮಾಧ್ಯಮ ಮತ್ತು ಇತರೆ ಡಿಜಿಟಲ್ ಮೂಲಗಳಿಂದ ಮಾಹಿತಿಗಳನ್ನು ಸುಲಭವಾಗಿ ಈಗ ಸಂಗ್ರಹಿಸಬಹುದು. ಕಲಿಕೆಯಲ್ಲಿ ಹೆಚ್ಚು ವೇಗವನ್ನು ರೂಢಿಸಿಕೊಂಡಿರುವ ವಿದ್ಯಾರ್ಥಿಗಳ ಅಗತ್ಯಕ್ಕ ತಕ್ಕಂತೆ ಬೋಧಿಸಬೇಕು' ಎಂದೂ ಅವರು ತಿಳಿಸಿದರು.

ಮೂಲ ವರದಿ: Prajavani ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruEducationUniversity