ಬೆಂಗಳೂರಿನಲ್ಲಿ ಒಂದೇ ಕುಟುಂಬದ 7 ಜನರ ಹತ್ಯೆ: ಹಂತಕನಿಂದ 11 ವರ್ಷದ ಬಾಲಕ ಬದುಕುಳಿದಿದ್ದೇ ರೋಚಕ
ಬೆಂಗಳೂರಿನಲ್ಲಿ 7 ಜನರ ಹತ್ಯಾಕಾಂಡ ಬೆಚ್ಚಿ ಬೀಳಿಸಿದೆ. ಪೈಶಾಚಿಕ ಕೃತ್ಯವೆಸಗಿದ ಕ್ಯಾಬ್ ಚಾಲಕ ಇಂದುಶೇಖರ್ ನರಮೇಧಕ್ಕೆ ಅಕ್ಟೋಬರ್ 16ರಂದೇ ಮುನ್ನುಡಿ ಬರೆದಿದ್ದ. ಮೊದಲು ಪತ್ನಿ ಸುನಿತಾಳನ್ನು ಕೊಲೆ ಮಾಡಿದ್ದ. ನಂತರ ರೂಪವತಿಯನ್ನ ಕೊಲೆ ಮಾಡಿದ್ದ. ಬಳಿಕ ದಿವ್ಯ, ಶಿವಕುಮಾರ್ ಮತ್ತು ಅವರ ಮಗ ಪುನೀತ್ ಕೊಲೆ ಮಾಡಿದ್ದ. ನಾಲ್ಕನೆಯದಾಗಿ ದಿವ್ಯ ಮತ್ತು ಶಿವಕುಮಾರ್ನನ್ನು ಹತ್ಯೆ ಮಾಡಿದ್ದಾನೆ. ಕೊನೆಯದಾಗಿ ನಳಿನಿ ಮತ್ತು ಶಂಕರ್ ಹತ್ಯೆಗೈದಿದ್ದ. ಅದೃಷ್ಟವಶಾತ್ ಅವರ ಜೊತೆ ಬಂದಿದ್ದ 10 ವರ್ಷದ ಮಗ ಬದುಕುಳಿದಿದ್ದಾನೆ. ನಳಿನಿ ಹಾಗೂ ಶಂಕರ್ ಕೊಂದು ಬಳಿಕ ಚೀಲದಲ್ಲಿ ತುಂಬಿಕೊಂಡು ಕಾರಿನಲ್ಲಿ ತೆಗೆದುಕೊಂಡು ಹೋಗಿ ಶಿರಾಡಿಘಾಟ್ನಲ್ಲಿ ಎಸೆದಿದ್ದ. ಅಚ್ಚರಿ ಅಂದ್ರೆ, ನಳಿನಿ ಹಾಗೂ ಶಂಕರ್ ಮೃತದೇಹಳನ್ನು ಕಾರಿನಲ್ಲಿ ಬಾಲಕನ ಜೊತೆ ಸಾಗಿಸಿದ್ದ. ಆ ವೇಳೆ ಏನಿದೆ ಎಂದು ಬಾಲಕ ಕೇಳಿದಾಗ ಕಸದ ಚೀಲ ಎಂದು ಕರೆದೊಯ್ದು ಇಬ್ಬರ ಶವ ಶಿರಾಡಿಘಾಟ್ನಲ್ಲಿ ಎಸೆದು ಬಾಲಕನ ಜೊತೆ ವಾಪಸ್ ಆಗಿದ್ದ. ಮನೆ ತಲುಪಿದ ಮೇಲೆ ಬಾಲಕನ ಕೊಲೆ ಮಾಡಲು ನಿರ್ಧರಿಸಿದ್ದ. ಆದ್ರೆ ಅಷ್ಟೊತ್ತಿಗೆ ಹಂತಕ ಇಂದುಶೇಖರ್, ಪೊಲೀಸರ ಕೈಲಿ ಸಿಕ್ಕಿಬಿದ್ದಿದ್ದಾನೆ.


