BLR Today
ಸೋಮವಾರ, ಅಕ್ಟೋಬರ್ 5, 2026ಬೆಂಗಳೂರಿನ ಸ್ಥಳೀಯ ಸುದ್ದಿ, ಬಡಾವಣೆಯಿಂದ ಬಡಾವಣೆಗೆ

ನಗರBengaluru1 ಗಂಟೆಗಳ ಹಿಂದೆ

ಆನೇಕಲ್‌ನಲ್ಲಿ ಅನಧಿಕೃತ ಪಿಜಿಗಳ ದರ್ಬಾರ್: ಬ್ಯಾಗಡದೇನಹಳ್ಳಿ ಗ್ರಾ.ಪಂ. ಅಧಿಕಾರಿಗಳಿಂದ 18 ಕಟ್ಟಡಗಳು ಸೀಜ್!

ಆನೇಕಲ್‌ನಲ್ಲಿ ಅನಧಿಕೃತ ಪಿಜಿಗಳ ದರ್ಬಾರ್: ಬ್ಯಾಗಡದೇನಹಳ್ಳಿ ಗ್ರಾ.ಪಂ. ಅಧಿಕಾರಿಗಳಿಂದ 18 ಕಟ್ಟಡಗಳು ಸೀಜ್!
ಚಿತ್ರ: TV9 Kannada

ಆನೇಕೇಲ್ ತಾಲೂಕಿನ ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಅನುಮತಿ ಪಡೆಯದೆ ಅಕ್ರಮವಾಗಿ ಕಾರ್ಯಾಚರಣೆ ನಡೆಸುತ್ತಿದ್ದ ಅನಧಿಕೃತ ಪಿಜಿ ಹಾಗೂ ನಿರ್ಮಾಣ ಹಂತದ ಕಟ್ಟಡಗಳ ಮೇಲೆ ಪಂಚಾಯಿತಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪ್ರತಿಷ್ಠಿತ ಅಲಯನ್ಸ್ ಕಾಲೇಜು ಸಮೀಪದ ಈಡನ್ ಗಾರ್ಡನ್, ನಕ್ಷತ್ರ ಹಾಗೂ ಸಾಯಿ ಬಡಾವಣೆಗಳಲ್ಲಿ ಐದಾರು ವರ್ಷಗಳಿಂದ ತಲೆಯೆತ್ತಿರುವ 28ಕ್ಕೂ ಹೆಚ್ಚು ಅನಧಿಕೃತ ಪಿಜಿಗಳ ವಿರುದ್ಧ ಪಿಡಿಒ ನಾಗರಾಜ್ ನೇತೃತ್ವದಲ್ಲಿ ಕಟ್ಟುನಿಟ್ಟಿನ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಸರ್ಕಾರಕ್ಕೆ ತೆರಿಗೆ ವಂಚನೆ ಗ್ರಾಮ ಪಂಚಾಯಿತಿ, ಯೋಜನಾ ಪ್ರಾಧಿಕಾರ, ಬೆಸ್ಕಾಂ ಹಾಗೂ ಅಗ್ನಿಶಾಮಕ ದಳದಿಂದ ಯಾವುದೇ ನಿರಾಕ್ಷೇಪಣಾ ಪತ್ರ (NOC) ಪಡೆಯದೆ ವಾಣಿಜ್ಯ ಉದ್ದೇಶಕ್ಕೆ ಕಟ್ಟಡಗಳನ್ನು ಬಳಸಲಾಗುತ್ತಿತ್ತು.

ಮೂಲ ವರದಿ: TV9 Kannada ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
AnekalBengaluruPanchayatBESCOMIllegal Construction