ಬೆಂಗಳೂರಿನಲ್ಲಿ 14ರಂದು ಫಿಡೆ ರೇಟೆಡ್ ಚೆಸ್ ಟೂರ್ನಿ
ಬೆಂಗಳೂರು ಗ್ರಾಮಾಂತರ ಜಿಲ್ಲಾ ಚೆಸ್ ಸಂಸ್ಥೆ ಆಶ್ರಯದಲ್ಲಿ 24ನೇ ಅಖಿಲ ಭಾರತ ಓಪನ್ ಫಿಡೆ ರೇಟೆಡ್ ಚೆಸ್ ಟೂರ್ನಿಯು ಇದೇ ತಿಂಗಳ 14ರಂದು ವೈಟ್‌ಫೀಲ್ಡ್‌ನ ಶ್ರೀಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಜಿ.ಎಂ.ಗಳಾದ ವಿಶಾಖ ಎನ್.ಆರ್., ಡಬ್ಲ್ಯುಐಎಂ ಆಕಾಂಕ್ಷಾ ಮೊದಲಾದವರು ಭಾಗವಹಿಸುವುದನ್ನು ಖಚಿತಪಡಿಸಿದ್ದಾರೆ. ಪ್ರವೇಶ ನೊಂದಣಿಗೆ ನವೆಂಬರ್ 12 ಕೊನೆಯ ದಿನ. www.circlechess.com ಮತ್ತು www.chessworld.ai ಮೂಲಕ ಹೆಸರು ನೋಂದಾಯಿಸಬಹುದು ಎಂದು ಚೀಫ್ ಆರ್ಬಿಟರ್ ಕೆ.ವಿ.ಶ್ರೀಪಾದ್ ತಿಳಿಸಿದ್ದಾರೆ.
ಮೂಲ ವರದಿ: Prajavani
ಸಾರ್ವಜನಿಕ ಸುದ್ದಿ ಫೀಡ್‌ನಿಂದ ಸತ್ಯಾಂಶ ಬದಲಿಸದೆ ಸಂಕ್ಷಿಪ್ತಗೊಳಿಸಲಾಗಿದೆ. ಪೂರ್ಣ ವರದಿಗೆ ಮೂಲ ಲಿಂಕ್ ನೋಡಿ.
BengaluruChessTournament

